ಸೋಮವಾರಪೇಟೆ: ಟಿಪ್ಪರ್ ಡಿಕ್ಕಿ ಹೊಡೆದು ಯುವಕ ದುರ್ಮರಣ

ಸಮಗ್ರ ನ್ಯೂಸ್: ಟಿಪ್ಪರ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸೋಮವಾರಪೇಟೆ ತಾಲೂಕಿನ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಗಣಸಿ ಎಂಬಲ್ಲಿ ನಡೆದಿದೆ.

Ad Widget ... ..

ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪದ ಗ್ರಾಮದ ಕೃಷಿಕ ರಮೇಶ್ ಎಂಬವರ ಪುತ್ರ ಮನೋಹರ್(33) ಮೃತಪಟ್ಟವರು.

Ad Widget

ಮನೋಹರ್ ತಿಪಟೂರಿನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಿದ್ದು, ಕೊಬ್ಬರಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಸೋಮವಾರ ತನ್ನೂರಿನಿಂದ ಹಾಸನದ ಮಾರ್ಗವಾಗಿ ತಿಪಟೂರಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ರಾತ್ರಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಗಾಯವಾಗಿತ್ತು. ಮೃತರು ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿಯನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *