ಕಲ್ಲಡ್ಕ: ಕಾರಿನೊಳಗೆ ಯುವಕನ ಮೃತದೇಹ ಪತ್ತೆ

ಸಮಗ್ರ ನ್ಯೂಸ್: ಕಾರಿನೊಳಗೆ ಯುವಕನೋರ್ವ ಕುಳಿತ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಗೋಳ್ತಮಜಲು ಗ್ರಾಮದ ನಿವಾಸಿ ಜಗದೀಶ್ ಮೃತಪಟ್ಟ ಯುವಕ.

Ad Widget ... ..

ಜಗದೀಶ್ ನಿನ್ನೆ ಬೆಳಿಗ್ಗೆ ತರವಾಡು ಮನೆಗೆ ಮಕ್ಕಳ ಜೊತೆ ದೈವದ ಕಾರ್ಯಕ್ಕೆ ಹೋಗಿದ್ದರು.ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ಬಳಿ 2 ಗಂಟೆ ಸುಮಾರಿಗೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಭಾವನಲ್ಲಿ ಹೇಳಿದ್ದು ನಾನು ಮತ್ತೆ ಮನೆಗೆ ಬರುತ್ತೇನೆ ನೀವು ‌‌ಮಕ್ಕಳ ಜೊತೆ ಮನೆಗೆ ಹೋಗಿ ಎಂದು ‌ಕಳುಹಿಸಿ ಕಾರಿನ ಸೀಟಿನಲ್ಲಿಯೇ ಮಲಗಿದ್ದರು.

Ad Widget

ಆದರೆ ರಾತ್ರಿ ‌7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಜಗದೀಶ್ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಹೊರಗಿನಿಂದ ಕಂಡುಬಂದಿದೆ.ಕಾರಿನ ಡೋರ್ ತೆಗೆದು ನೋಡಿದಾಗ ಜಗದೀಶ್ ಮೃತಪಟ್ಟಿರುವುದು ಕಂಡು ಬಂದಿದೆ.

Leave a Comment

Your email address will not be published. Required fields are marked *