ಸಮಗ್ರ ನ್ಯೂಸ್: ಏಳು ಅಂತಸ್ತಿನ ಕಟ್ಟಡದಿಂದ ಬಿದ್ದು MBBS ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬೀದರ್ನ ಬ್ರೀಮ್ಸ್ ಆಸ್ಪತ್ರೆ ಆವರಣದಲ್ಲಿರುವ MBBS ಹಾಸ್ಟೆಲ್ ಟೆರಸ್ ಮೇಲಿಂದ ವಿದ್ಯಾರ್ಥಿ ಹಾರಿ ಸಾವನ್ನಪ್ಪಿದ್ದಾನೆ.
MBBS ನಲ್ಲಿ ಅಂತಿಮ ವರ್ಷದ ವ್ಯಾಸಂಗ ಶ್ರೀರಾಮ್ ಕಾಡಗಿ(22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಕಲಿಕೆಯಲ್ಲಿ ಈತ ಟಾಪರ್ ಕೂಡ ಆಗಿದ್ದು, ಕೆಲವು ದಿನಗಳಿಂದ ಶ್ರೀರಾಮ ಕಾಡಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಬೆಳಗ್ಗಿನ ಜಾವ 7;30ಕ್ಕೆ ಹಾಸ್ಟೆಲ್ ಟೆರೆಸ್ ಮೇಲಿಂದ ಹಾರಿ ಸಾವನ್ನಪ್ಪಿದ್ದಾನೆ.
ಶ್ರೀರಾಮ ಕಾಡಗಿ ಸಾವು ನೋಡಿ MBBS ಸಹ ವಿದ್ಯಾರ್ಥಿಗಳು ಕಣ್ಣೀರು ಸುರಿಸಿದ್ದಾರೆ. ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



























