‘ಕುಟ್ಟಿ ಪಟ್ಟಾಳಂ’ ಖ್ಯಾತಿಯ ಮಲೆಯಾಳಂ ನಟಿ ಸುಬಿ ಸುರೇಶ್ ಇನ್ನಿಲ್ಲ

ಸಮಗ್ರ ನ್ಯೂಸ್: ಮಲಯಾಳಂ ಖ್ಯಾತ ನಟಿ ಸುಬಿ ಸುರೇಶ್ ನಿಧನರಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವರು ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದು, ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

Ad Widget ... ..

ಹಾಸ್ಯಕ್ಕೆ ಹೆಸರುವಾಸಿಯಾದ ಸುಬಿ ಅವರು ವಿವಿಧ ಸ್ಟೇಜ್ ಶೋಗಳಲ್ಲಿ ಡ್ಯಾನ್ಸ್ ಮತ್ತು ಹಾಸ್ಯನಟರಾಗಿ ವೃತ್ತಿಯನ್ನು ಆರಂಭಿಸಿದ್ದರು. ಅವರು ಮಳವಿಲ್ ಮನೋರಮಾ ಅವರ ‘ಮೇಡ್ ಫಾರ್ ಈಚ್’ ಮತ್ತು ಸೂರ್ಯ ಟಿವಿಯ ‘ಕುಟ್ಟಿ ಪಟ್ಟಾಲಂ’ ನಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

Ad Widget

‘ಗೃಹನಾದನ್’, ‘ತಕ್ಸರಾ ಲಹಲಾ’, ‘ಎಲ್ಸಮ್ಮ ಎನ್ನಾ ಆನ್ ಕುಟ್ಟಿ’, ‘ಡ್ರಾಮಾ’, ‘ಕರಿಯಸ್ತಾನ್’ ಮುಂತಾದ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಸುಬಿ ಅವರು ನಟಿಸಿದ್ದರು. ಸುಬಿ ಸುರೇಶ್ ಅಗಲುವಿಕೆಯಿಂದ ಮಲೆಯಾಳಂ ಚಿತ್ರರಂಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

Leave a Comment

Your email address will not be published. Required fields are marked *