ಸಮಗ್ರ ನ್ಯೂಸ್: ಕಾಂಗ್ರೆಸಿಗರ ಕಿವಿ ಮೇಲೆ ಹೂ ಅಭಿಯಾನವನ್ನು ಟೀಕಿಸುವ ಭರದಲ್ಲಿ ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದು ಹೇಳಿದ ಜಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೇಚಿಗೆ ಸಿಲುಕಿದ್ದಾರೆ. ಈ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ಭಾರೀ ವಿರೋಧಕ್ಕೆ ಗುರಿಯಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲೇ ಅತಿ ಹೆಚ್ಚು ಗಲಭೆಗಳಾಗಿವೆ. ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕಾಂಗ್ರೆಸ್ನವರು ಜನರ ಕಿವಿಗೆ ಹೂವು ಇಟ್ಟೇ ಬದುಕಿದವರು ಎಂದು ಜಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಈ ಹಿಂದೆ ಭಾರತ ಸಾಲಗಾರರ ಹಾಗೂ ಮೋಸಗಾರರ ರಾಷ್ಟ್ರವಾಗಿತ್ತು. ಈ ಎಲ್ಲಾ ಅಪವಾದಗಳನ್ನು ತೆಗೆದು ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ನಮ್ಮ ಸರ್ಕಾರ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಹೂವಿಡುವ ಕೆಲಸ ಮಾಡ್ತಿದೆ ವಾಗ್ದಾಳಿ ಮಾಡಿದರು.
ಇದೀಗ ನಳೀನ್ ಕುಮಾರ್ ಅವರ ಹೇಳಿಕೆಗೆ ರಾಜ್ಯದಂತ ಟೀಕೆಗಳು ವ್ಯಕ್ತವಾಗುತ್ತಿದೆ. ನಳೀನ್ ಅವರು ಕ್ಷಮೆ ಕೇಳಬೇಕೆಂದು ಹೆಚ್ಚಿನವರು ಆಗ್ರಹಿಸಿದ್ದಾರೆ.