ಇವರೇನು ಮನುಷ್ಯರಾ? ಅಥವಾ ರಾಕ್ಷಸರಾ? ಅಶ್ವಥ್ ನಾರಾಯಣ ಹೇಳಿಕೆಗೆ ಸಿದ್ದು ಕಿಡಿ

ಸಮಗ್ರ ನ್ಯೂಸ್: ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂಬುದಾಗಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿದ್ದರು. ಅವರು ಮನುಷ್ಯನೋ ರಾಕ್ಷಸನೋ ನೀವೇ ತಿಳಿದುಕೊಳ್ಳಿ ಎಂಬುದಾಗಿ ಸಿದ್ಧರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ.

Ad Widget ... ..

ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಯಿಂದಲೇ ಅವರ ವ್ಯಕ್ತಿತ್ವ ಎಂಥದ್ದು ಎಂಬುದು ಗೊತ್ತಾಗುತ್ತದೆ. ನೀವೇ ಅವರು ಮನುಷ್ಯರೋ, ರಾಕ್ಷಸರೋ ಎಂಬುದನ್ನು ತಿಳಿದುಕೊಳ್ಳಿ ಎಂದರು.

Ad Widget

ನಾನು ಟಿಪ್ಪು, ಬಸವಣ್ಣ, ಬುದ್ಧ ಎಲ್ಲರನ್ನು ಗೌರವಿಸುತ್ತೇನೆ. ನಾನು ಮನುಷ್ಯತ್ವ ಇರೋರವನ್ನು ಎಲ್ಲರನ್ನು ಸಮಾನರೆಂದೇ ಭಾವಿಸುತ್ತೇನೆ. ಹಿಂದೂ, ಮುಸ್ಲೀಂ, ಕ್ರೈಸ ಸೇರಿ ಎಲ್ಲರನ್ನು ಪ್ರೀತಿಸುವುದಾಗಿ ಹೇಳಿದರು.

Leave a Comment

Your email address will not be published. Required fields are marked *