ಸಮಗ್ರ ನ್ಯೂಸ್: ಅಭಿಮಾನಿಗಳ ಮನಗೆದ್ದಿರೋ ಟೀಂ ಇಂಡಿಯಾದ ಅದ್ಭುತ ಆಟಗಾರ ಹಾರ್ದಿಕ್ ಪಾಂಡ್ಯ ಸದ್ಯ ಕ್ರಿಕೆಟ್ ಹೊರತಾಗಿ ಬೇರಯದೇ ವಿಷಯಕ್ಕೆ ಸುದ್ದಿಯಾಗ್ತಿದ್ದಾರೆ.
ತಮ್ಮ ವೈಯಕ್ತಿಕ ಜೀವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರೆರೆ ಸೆಂಕೆಡ್ ಇನ್ನಿಂಗ್ಸ್ ಅಂದ್ರೆ ಮತ್ತೊಂದು ಮದುವೆ ಆದ್ರಾ ಅಂತ ಕನ್ಪ್ಯೂಸ್ ಆಗ್ಬೇಡಿ. ಇದು ಮತ್ತೊಂದು ಮದುವೆಯಲ್ಲ ಬದಲಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ನಟಾಶಾ ಸ್ಟಾಂಕೋವಿಕ್ ಜೋಡಿ ಮೂರು ವರ್ಷದ ಹಿಂದೆ ರಿಂಗ್ ಬದಲಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ರು. ಆದರೆ ಸಾಂಪ್ರದಾಯಿಕವಾಗಿ ಮದುವೆ ಆಗಿರಲಿಲ್ಲ. ಈ ಮಧ್ಯೆ ಜೋಡಿಗೆ ಗಂಡು ಮಗುವಿನ ಜನನ ಸಹ ಆಗಿತ್ತು. ಮಗ ಬೆಳೆದು ಅಂಬೆಗಾಲಿಡುತ್ತ ಮೂರು ವರ್ಷವೂ ಕಳೆದು ಹೋಗಿತ್ತು. ಆದರೆ ಸಾಂಪ್ರದಾಯಿಕವಾಗಿ ಮದುವೆ ಆಗಿಲ್ವಲ್ಲ ಅನ್ನೋ ಕೊರಗು ಈ ಜೋಡಿಗೆ ಕಾಡಿತ್ತು.
ಯಾರೇನೆ ಅನ್ನಲಿ ನಮ್ಮ ಆಸೆಯನ್ನು ಈಡೇರಿಸಿಕೊಳ್ಳಲೇ ಬೇಕು ಅಮತಾ ಪಣತೊಟ್ಟ ಹಾರ್ದಿಕ್-ನಟಾಶಾ ಜೋಡಿ ಸಾಂಪ್ರದಾಯಿಕವಾಗಿ ಮಗ ಅಗಸ್ತ್ಯನ ಮುಂದೆ ಮದುವೆಯಾಗಿದ್ದಾರೆ. ರಾಜಸ್ಥಾನದ ಉದಯಪುರದ ಜೈಸಮಂದ್ ರೆಸಾರ್ಟ್ನಲ್ಲಿ ಪ್ರೇಮಿಗಳ ದಿನದಂದೇ ಜೋಡಿ ವಿವಾಹವಾಗಿದ್ದಾರೆ. ಈ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಹಾರ್ದಿಕ್-ನಟಾಶಾ ಜೋಡಿ ನಿನ್ನೆ ಸಾಂಪ್ರದಾಯಿಕವಾಗಿ ಮದುವೆಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.