ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ| ಮೊದಲ ಭೇಟಿ ವೇಳೆ ‘ಅಯ್ಯೋ’ ಎಂದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ರಾತ್ರಿ(ಫೆ.12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಇವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಕೂಡ ಇದ್ದರು.

Ad Widget ... ..

ಈಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಪ್ರಧಾನಿ ಅವರನ್ನು ಭೇಟಿ ಮಾಡಿದೆ ಎಂದು ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಆಡಿದ ಮೊದಲ ಮಾತು ‘ಅಯ್ಯೋ’ ಎಂದು! ಈ ವಿಚಾರವನ್ನು ಕೂಡ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಜತೆಗೆ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

Ad Widget

ಶ್ರದ್ಧಾ ತಾಯಿ ಟೀಚರ್, ತಂದೆ ಅಕೌಂಟಂಟ್. ಶ್ರದ್ಧಾ ಆರಂಭದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ನಂತರ ಅವರು ಕೆಲಸಬಿಟ್ಟರು. ಶ್ರದ್ಧಾ ಅವರು ಆರ್​ಜೆ ಆಗಿ ಕೆಲಸ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರಕಂಡ ‘ಪುಷ್ಪವಲ್ಲಿ’ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಪಿಜಿ ವಾರ್ಡನ್ ಆಗಿ ಗಮನ ಸೆಳೆದಿದ್ದರು. ಅವರು ಮಾಡಿದ ವಾಸು ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಇತ್ತೀಚೆಗೆ ತೆರೆಗೆ ಬಂದ ಆಯುಷ್ಮಾನ್ ಖುರಾನಾ ನಟನೆಯ ಹಿಂದಿ ಚಿತ್ರ ‘ಡಾಕ್ಟರ್​ ಜಿ’ನಲ್ಲಿ ಶ್ರದ್ಧಾ ನಟಿಸಿದ್ದರು.

Leave a Comment

Your email address will not be published. Required fields are marked *