Ad Widget .

ಏರೋ ಇಂಡಿಯಾ 2023ಕ್ಕೆ ಚಾಲನೆ| ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಸಮಗ್ರ ನ್ಯೂಸ್: ಇಂದಿನಿಂದ 5 ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇಂದಿನಿಂದ 5 ದಿನಗಳ ಕಾಲ ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಕಲರವದ ರಂಗು ಇರಲಿದೆ. ಅಮೆರಿಕಾ, ಬ್ರಿಟನ್​, ಇಸ್ರೇಲ್​, ಇಟಲಿ, ಜಪಾನ್​ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್​​ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ.

Ad Widget . Ad Widget . Ad Widget .

699 ಭಾರತೀಯ ಪ್ರದರ್ಶಕರು, 110 ವಿದೇಶಿ ಪ್ರದರ್ಶಕರು, 25 ದೇಶಗಳ ರಕ್ಷಣಾ ಸಚಿವರು ಏರ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಐಎಎಫ್ ತೇಜಸ್ ದೇಸಿ ಸೂಪರ್ ಸಾನಿಕ್ ಫೈಟರ್ ಹೆಚ್ಚು ಹೈ ಲೈಟ್, ಆತ್ಮ ನಿರ್ಭರ್ ಪರಿಕಲ್ಪನೆಯ ಹೆಚ್​​ಎಎಲ್​ ಹೆಲಿಕಾಪ್ಟರ್​ಗಳ ಪ್ರದರ್ಶನವಾಗಲಿದ್ದು, ರಫೆಲ್ ಯುದ್ಧ ವಿಮಾನವು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಹೆಚ್​​ಎಎಲ್​ ನಿರ್ಮಿತ HLFT-42 ಸೂಪರ್‌ಸಾನಿಕ್ ಜೆಟ್ ಕೂಡ ಪ್ರದರ್ಶನ ನೀಡಲಿದೆ. ಕೆಲ ದಿನಗಳಿಂದ ಏರೋ ಇಂಡಿಯಾ 2023 ಆವೃತ್ತಿಗೆ ಕಳೆದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ತಾಲೀಮು ನಡೆಸಿವೆ.

ಹಾಕ್ ಯುದ್ಧವಿಮಾನಗಳ ವೈಭವದ ಹಾರಾಟ ನಡೆಸಿದರೆ, ನೇತ್ರಾ ಯುದ್ಧವಿಮಾನಗಳು ಬಾನಂಗದಲ್ಲಿ ಚಿತ್ತಾರ ಮೂಡಿಸಿದವು. ಮಿಗ್-29, ಜಾಗ್ವಾರ್, ಸುಖೋಯ್ ವಿಮಾನಗಳ ವೈಮಾನಿಕ ಹಾರಾಟ ಆರಂಭವಾಗಿದೆ. ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಲೋಹದ ಹಕ್ಕಿಗಳ ಕಲರವಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

Leave a Comment

Your email address will not be published. Required fields are marked *