ಸಮಗ್ರ ನ್ಯೂಸ್: ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಮರು ಮದುವೆಯಾಗಲು ಮುಂದಾಗಿದ್ದಾರೆ. ವ್ಯಾಲೆಂಟೈನ್ಸ್ ಡೇ ದಿನ ಅವರು ಮದುವೆಯಾಗಲಿದ್ದಾರಂತೆ. ಅಂದ ಹಾಗೆಯೇ, ಪ್ರೇಮಿಗಳ ದಿನಾಚರಣೆಗೆ ಒಂದೇ ದಿನ ಬಾಕಿ ಇದ್ದು, ಫೆಬ್ರವರಿ 13ರಂದು ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬಂದಿದೆ.
ಹಾರ್ದಿಕ್ ಪಾಂಡ್ಯ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಪ್ರೀತಿಸಿ ಬಳಿಕ ಗಂಡು ಮಗುವಿಗೆ ತಂದೆಯಾದ ಬಗ್ಗೆ ತಿಳಿದೇ ಇದೆ. ಅದರೀಗ ಮರು ಮದುವೆಯಾಗಲು ಈ ಕ್ರಿಕೆಟಿಗ ಮುಂದಾಗಿದ್ದಾರೆ. ಅಂದ ಹಾಗೆ ವಧು ಯಾರು ಗೊತ್ತಾ?.
ಹಾರ್ದಿಕ್ ಪಾಂಡ್ಯ ಅವರು ಯಾಚ್ನಲ್ಲಿ ನತಾಶಾ ಸ್ಟಾಂಕೋವಿಕ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ಬಳಿಕ ವಿವಾಹವಾಗದೆ ಒಟ್ಟಿಗೆ ಜೀವಿಸಲು ಶುರು ಮಾಡಿದರು. ಬಳಿಕ ಈ ಜೋಡಿ ಅಗಸ್ತ್ಯ ಎಂಬ ಮುದ್ದಾದ ಗಂಡು ಮಗುವಿನ ಪೋಷಕರಾದರು. ಆದರೀಗ ಈ ಜೋಡಿ ಮರು ಮದುವೆಯಾಗುತ್ತಿದ್ದಾರಂತೆ. ಹಾರ್ದಿಕ್ ಮತ್ತೊಮ್ಮೆ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹಾರ್ದಿಕ್ ಪಾಂಡ್ಯ ವಿವಾಹವು ಫೆಬ್ರವರಿ 13ರಿಂದ ಪ್ರಾರಂಭವಾಗಿ ಫೆಬ್ರವರಿ 16ರವರೆಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹರಿದಾಡುತ್ತಿರುವ ಮಾಹಿತ ಪ್ರಕಾರ, ಹಾರ್ದಿಕ್ ಮತ್ತು ನತಾಶಾ ಸ್ಟಾಂಕೋವಿಕ್ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಕಳೆದ ನವೆಂಬರ್ನಲ್ಲಿಯೇ ಇದರ ಸಿದ್ಧತೆಗಳು ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.