ಸುಳ್ಯ: ವಿಷ ಸೇವಿಸಿದ ಯುವಕ ಮೃತ್ಯು

ಸಮಗ್ರ ನ್ಯೂಸ್: ಸುಳ್ಯ ಜಯನಗರದ ಯುವಕನೋರ್ವ ಕಳೆದ ಒಂದು ವಾರದ ಹಿಂದೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Ad Widget ... ..

ಸುಳ್ಯ ನಗರದ ಜಯನಗರ ನಿವಾಸಿ ದಿವಂಗತ ಕೃಷ್ಣ ಎಂಬುವರ ಪುತ್ರರಾದ ಸಂದೀಪ್ (20 )ಎಂಬಾತ ಇವರು ಒಂದು ವಾರದ ಹಿಂದೆ ಜಯನಗರ ತಮ್ಮ ಮನೆಯಲ್ಲಿಯೇ ವಿಷ ಸೇವನೆ ಮಾಡಿದ್ದರು. ಈ ಸಂದರ್ಭ ಮನೆಯವರಿಗೆ ವಿಷಯ ತಿಳಿದು ಆತನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

Ad Widget

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *