ಕಾವೂರು ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಬೆಂಕಿಗಾಹುತಿ

ಸಮಗ್ರ ನ್ಯೂಸ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಮನೆ ಬೆಂಕಿಗಾಹುತಿಯಾದ ಘಟನೆ ಕಾವೂರು ಸಮೀಪದ ಪಳನೀರ್ ಎಂಬಲ್ಲಿ ಜರುಗಿದೆ.

Ad Widget ... ..

ಇಂದಿರಾ ಎಂಬವರ ಮನೆ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿದ್ದು ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಸೊತ್ತುಗಳ ಸಹಿತ ಬೆಲೆಬಾಳುವ ಸೊತ್ತುಗಳು ಸುಟ್ಟುಹೋಗಿದ್ದು ಅಂದಾಜು 5 ಲಕ್ಷ ರೂ. ನಷ್ಟ ಉಂಟಾಗಿದೆ. ಇಂದಿರಾ ಅವರು ಕೆಲಸಕ್ಕೆ ಹೋಗಿದ್ದು ಘಟನೆ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲ. ಆಕಸ್ಮಿಕ ದುರ್ಘಟನೆಯಿಂದಾಗಿ ಬಡಕುಟುಂಬ ತಲೆಮೇಲೆ ಕೈಹೊತ್ತು ಕೂತಿದೆ.

Ad Widget

ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ, ಪರಿಶೀಲನೆ!
ಬೆಂಕಿ ಅವಘಡಕ್ಕೆ ತುತ್ತಾದ ಇಂದಿರಾ ಅವರ ಮನೆಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಕುಟುಂಬವನ್ನು ತುರ್ತಾಗಿ ಬಾಡಿಗೆ ಮನೆಗೆ ಸ್ಥಳಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಬಿಜೆಪಿ ಮುಖಂಡರಿಗೆ ಶಾಸಕರು ನಿರ್ದೇಶನ ನೀಡಿದರು.

Leave a Comment

Your email address will not be published. Required fields are marked *