2.41 ಕೋ. ರೂ. ಅನುದಾನದಲ್ಲಿ ಬೈಕಂಪಾಡಿಯಲ್ಲಿ ಅಭಿವೃದ್ಧಿಗೆ ಶಾಸಕರಿಂದ ಗುದ್ದಲಿಪೂಜೆ!

ಸಮಗ್ರ ನ್ಯೂಸ್: ಬೈಕಂಪಾಡಿ 10ನೇ ವಾರ್ಡ್ ಅಭಿವೃದ್ಧಿಗಾಗಿ 2.41 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಗುದ್ದಲಿಪೂಜೆ ನೆರವೇರಿಸಿದರು.

Ad Widget ... ..

ಬಳಿಕ ಮಾತಾಡಿದ ಶಾಸಕರು “ಬೈಕಂಪಾಡಿ 10ನೇ ವಾರ್ಡ್ ನಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಣ್ಣಪುಟ್ಟ ಅಡಚಣೆ ಎದುರಾಗುವುದು ಸಹಜ. ಜನರು ಸಹಕಾರ ನೀಡಿದಲ್ಲಿ ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಯಲಿದೆ” ಎಂದರು.

Ad Widget

ಸ್ಥಳೀಯ ಕಾರ್ಪೋರೇಟರ್ ಸುಮಿತ್ರಾ ಕರಿಯ, ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *