ಪ್ರಜಾಧ್ವನಿ ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದ ಇನಾಯತ್ ಅಲಿ ಮೂಲ್ಕಿ!!

ಸಮಗ್ರ ನ್ಯೂಸ್: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದ್ದ ಪ್ರಜಾಧ್ವನಿ ಬೃಹತ್ ಸಮಾವೇಶಕ್ಕೆ ತೆರಳುವ ದಾರಿ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಎನ್ ಐಟಿಕೆ ಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇನಾಯತ್ ಮೂಲ್ಕಿ ಅವರು ಭವ್ಯವಾಗಿ ಸ್ವಾಗತ ಕೋರಿದರು.

. Ad Widget . Ad Widget . Ad Widget

ಉಡುಪಿಯಿಂದ ಸಾಗಿಬಂದ ಪ್ರಜಾಧ್ವನಿ ಯಾತ್ರೆಯನ್ನು ಎನ್ ಐಟಿಕೆ ಬಳಿ ಕಾಂಗ್ರೆಸ್ ಮುಖಂಡರು, ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಸ್ತೆಯ ಇಕ್ಕೆಲದಲ್ಲಿ ನಿಲ್ಲಿಸಿದ್ದ ಎರಡು ಜೆಸಿಬಿಯಿಂದ ಯಾತ್ರೆಯ ವಾಹನದ ಮೇಲೆ ಹೂವಿನ ಮಳೆ ಸುರಿಸಲಾಯಿತು. ಇನಾಯತ್ ಅಲಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಕೂರಿಸಿ ಜಯಕಾರ ಹಾಕಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರತ್ತ ಕೈಬೀಸಿ ಮುಂದಕ್ಕೆ ಚಲಿಸಿದರು. ನೂರಾರು ಬೈಕ್, ಕಾರ್ ಗಳಲ್ಲಿ ಇನಾಯತ್ ಅಲಿ ಬೆಂಬಲಿಗರು ಪಕ್ಷದ ನಾಯಕರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

. Ad Widget .

ಎಸಿಪಿ ಮಹೇಶ್ ಪ್ರಸಾದ್, ಸುರತ್ಕಲ್ ಎಸ್ ಐ ಪುನೀತ್ ಗಾಂವ್ಕರ್ ಬಂದೋಬಸ್ತ್ ಏರ್ಪಡಿಸಿದ್ದರು.

Leave a Comment

Your email address will not be published. Required fields are marked *