ಶಿಕ್ಷಕರನ್ನು ಸರ್, ಮೇಡಂ ಎಂದು ಸಂಬೋಧಿಸಬಾರದು – ಹೈಕೋರ್ಟ್

ಸಮಗ್ರ ನ್ಯೂಸ್: ವಿದ್ಯಾರ್ಥಿಗಳು ಇನ್ನು ಮುಂದೆ ಅಧ್ಯಾಪಕರನ್ನು ಸರ್, ಮೇಡಂ ಎಂದು ಸಂಬೋಧಿಸದೆ ಟೀಚರ್ ಎಂದು ಕರೆಯಲು ಸೂಚಿಸಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಲ್ಲಾ ಶಾಲೆಗಳಿಗೆ ನಿರ್ಧೇಆನ ನೀಡಿದೆ.

Ad Widget ... ..

ಶಿಕ್ಷಕರನ್ನು ವಿದ್ಯಾರ್ಥಿಗಳು ಸರ್, ಮೇಡಂ ಎಂದು ಸಂಬೋಧಿಸದೆ ಟೀಚರ್ ಎಂದು ಕರೆಯಲು ಸೂಚಿಸಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಿದೆ.

Ad Widget

ಟೀಚರ್ ಪದದಲ್ಲಿ ಲಿಂಗ ತಟಸ್ಥವಾಗಿ ಇರುವುದರಿಂದ ಈ ಪದ ಸೂಕ್ತವಾಗುತ್ತದೆ. ಹೀಗಾಗಿ ವಿದ್ಯರ‍್ಥಿಗಳು ಶಿಕ್ಷಕರನ್ನು ಸರ್, ಮೇಡಂ ಎನ್ನದೇ ಟೀಚರ್ ಎಂದೇ ಸಂಬೋಧಿಸಬೇಕು ಎಂದು ಸೂಚನೆ ನೀಡಬೇಕು ಎಂದು ಆಯೋಗ ತಿಳಿಸಿದೆ.

ಆಯೋಗದ ಮುಖ್ಯಸ್ಥರಾದ ಕೆ.ವಿ. ಮನೋಜ್‌ ಕುಮಾರ್‌ ಹಾಗೂ ಸದಸ್ಯ ಸಿ. ವಿಜಯ್‌ ಕುಮಾರ್‌ ಅವರು ರಾಜ್ಯದ ಶಿಕ್ಷಣ ಇಲಾಖೆಗೆ ಈ ಸೂಚನೆ ನೀಡಿದ್ದಾರೆ. ಶಿಕ್ಷಕರೊಂದಿಗಿನ ಬಾಂಧವ್ಯ ಮತ್ತು ಸಮಾನತೆ ಹೆಚ್ಚಳದ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *