ಚಲಿಸುತ್ತಿದ್ದ ಸ್ಕೂಟಿ‌ಯಲ್ಲಿ ಪ್ರೇಮಿಗಳ ರೊಮ್ಯಾನ್ಸ್| ನಡುರಸ್ತೆಯಲ್ಲೇ ಕಿಸ್ ನ ಸುರಿಮಳೆಗೈದ ಪ್ರೇಮಿ

ಸಮಗ್ರ ನ್ಯೂಸ್: ಸಂಚಾರಿ ಪೊಲೀಸರ ಭಯವಿಲ್ಲದೇ ನಡು ರಸ್ತೆಯಲ್ಲೇ ಸ್ಕೂಟಿ ಮೇಲಿದ್ದ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡಿರುವ ಘಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ.

Ad Widget ... ..

ಹೆಲ್ಮೆಟ್ ಧರಿಸದೇ, ಸಂಚಾರಿ ನಿಯಮಗಳನ್ನೂ ಲೆಕ್ಕಿಸದೇ, ಕನಿಷ್ಠ ಸಾರ್ವಜನಿಕರ ಭಯವೂ ಇಲ್ಲದೇ ಸ್ಕೂಟರ್ ಚಲಾಯಿಸುತ್ತಿದ್ದ ಪ್ರಿಯತಮೆಗೆ ಪ್ರೇಮಿಯೊಬ್ಬ ಮುತ್ತಿನ ಸುರಿಮಳೆಗೈದಿದ್ದಾನೆ.

Ad Widget

ಎರಡು ದಿನಗಳ ಹಿಂದೆ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರೇಮಿಗಳ ಹುಚ್ಚಾಟ ಸ್ಕೂಟರ್ ಹಿಂಬದಿ ಸಾಗುತ್ತಿದ್ದ ಕಾರಿನಲ್ಲಿದ್ದ ಪ್ರಯಾಣಿಕರ‌ ಮೊಬೈಲ್​ನಲ್ಲಿ ಸೆರೆಯಾಗಿದೆ.

ಘಟನೆಯಿಂದ ಎಚ್ಚೆತ್ತ ಪೊಲೀಸರು ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆಯಡಿ‌ ಪ್ರಕರಣ ದಾಖಲಿಸಿಕೊಂಡು, ಇಬ್ಬರ ಪೋಷಕರನ್ನೂ ಕರೆಯಿಸಿ ಕೌನ್ಸೆಲಿಂಗ್ ಮಾಡಿದ್ದಾರೆ.

Leave a Comment

Your email address will not be published. Required fields are marked *