ಸೌದಿಯಿಂದ ಬಂದ ಮಂಗಳೂರು ಮೂಲದ ವ್ಯಕ್ತಿಗೆ ಕೋವಿಡ್ ದೃಢ

ಸಮಗ್ರ ನ್ಯೂಸ್: ಸೌದಿ ಅರೇಬಿಯದಿಂದ ಆಗಮಿಸಿದ ಮಂಗಳೂರು ಮೂಲದ ವ್ಯಕ್ತಿಗೆ ಕೋವಿಡ್‌ ದೃಢಪಟ್ಟಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Ad Widget ... ..

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಂಗಳೂರಿನ ವ್ಯಕ್ತಿಯನ್ನು ಅಲ್ಲಿ ಕೋವಿಡ್‌ ತಪಾಸಣೆಗೆ ಒಳಪಡಿಸಿದಾಗ ಕೋವಿಡ್‌ ದೃಢಪಟ್ಟಿದೆ. ಸೌಮ್ಯ ಗುಣಲಕ್ಷಣ ಹೊಂದಿದ ಕಾರಣ ಅವರನ್ನು ಮಂಗಳೂರಿನ ಅವರ ಮನೆಯಲ್ಲಿ ಗೃಹ ನಿಗಾವಣೆಯಲ್ಲಿರಿಸಲಾಗಿದೆ.

Ad Widget

ಹೈರಿಸ್ಕ್ ದೇಶಗಳ ಪೈಕಿ ಸೌದಿ ಅರೇಬಿಯಾ ಇಲ್ಲ. ಆದರೆ ರ್‍ಯಾಂಡಮ್‌ ಆಗಿ ತಪಾಸಣೆ ವೇಳೆ ಪಾಸಿಟಿವ್‌ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಒಬ್ಬರಲ್ಲಿ ಕೋವಿಡ್‌ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸದ್ಯ ಒಂದು ಕೋವಿಡ್‌ ಪ್ರಕರಣ ಇದೆ.

Leave a Comment

Your email address will not be published. Required fields are marked *