ಸುಳ್ಯ: ಉದ್ಯಮಿ ನವೀನ್ ಮಲ್ಲಾರರನ್ನು ಅಂಬ್ಯುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣ| ಸ್ಪಷ್ಟನೆ ನೀಡಿದ 5ನೇ ಆರೋಪಿ

ಸಮಗ್ರ ನ್ಯೂಸ್: ಬೆಳ್ಳಾರೆಯ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಕಾಮಧೇನು ಇದರ ಮಾಲಕ , ಯುವ ಉದ್ಯಮಿ ನವೀನ್ ಎಂಬವರನ್ನು ಬಲವಂತವಾಗಿ ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಐದನೇ ಆರೋಪಿಯಾಗಿ ಬೆಳ್ಳಾರೆ ಸಮೀಪದ ತಂಬಿನಮಕ್ಕಿ ಮನೆ ನಿವಾಸಿ ನವೀನ್ ಕುಮಾರ್ ರೈ ಟಿ ಎಂಬವರನ್ನು ಹೆಸರಿಸಲಾಗಿದೆ. ಆದರೇ ಈ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ನವೀನ್ ಕುಮಾರ್‌ ಅವರು ಪತ್ರಿಕಾ ಪ್ರಕಟನೆ ನೀಡಿದ್ದಾರೆ.

Ad Widget ... ..

ನವೀನ್ ಕಾಮಧೇನು ಅವರನ್ನು ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ಮಾಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಾದ ವಿಷಯ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ಆದರೆ ಈ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಇವರ ಯಾವುದೇ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರುವುದಿಲ್ಲ.

Ad Widget

ಈ ಘಟನೆಗೆ ಸಂಬಂಧಿಸದ ನನ್ನ ವಿರುದ್ದ ವಿನಾ ಕಾರಣ ದೂರು ನೀಡಿರುವ ನೀರಜಾಕ್ಷಿ ಕೋಮ್ ಮಾಧವ ಗೌಡ ಪ್ರಾಯ: 55 ಧರ್ಮಶ್ರೀ ನಿಲಯ, ಬೆಳ್ಳಾರೆ ಗ್ರಾಮ, ಸುಳ್ಯ ತಾಲೂಕು, ದ.ಕ. ಇವರು ಮಾಧ್ಯಮಗಳ ಮೂಲಕ ಈ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ

Leave a Comment

Your email address will not be published. Required fields are marked *