ಬೈಕ್ ನಲ್ಲಿ ಬಂದು ಬಾಲಕಿಗೆ ಆ್ಯಸಿಡ್ ಎರಚಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಬೈಕ್​ನಲ್ಲಿ ಬಂದ ಇಬ್ಬರು ಯುವಕರು 17ವರ್ಷದ ಬಾಲಕಿಯ ಮೇಲೆ ಆಯಸಿಡ್​ ಎರಚಿದ ಘಟನೆ ದೆಹಲಿಯ ದ್ವಾರಕ ಜಿಲ್ಲೆಯ ಉತ್ತಮ್​ನಗರದಲ್ಲಿ ಡಿ. ೧೪ರಂದು ನಡೆದಿದೆ.

Ad Widget ... ..

ಬಾಲಕಿ ತನ್ನ ತಂಗಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ದುಷ್ಕೃತ್ಯ ನಡೆದಿದ್ದು, ಗಂಭೀರ ಗಾಯಗೊಂಡಿರುವ ಆಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಎಂ ಹರ್ಷವರ್ಧನ್ ತಿಳಿಸಿದರು.

Ad Widget

ಬಾಲಕಿಯ ಎರಡೂ ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದೆ. ಇಬ್ಬರ ಹೆಸರನ್ನು ಆಕೆ ಹೇಳಿದ್ದಾಳೆ. ಅವರಲ್ಲಿ ಓರ್ವ ಪೊಲೀಸರ ವಶದಲ್ಲಿದ್ದಾನೆ. ಪ್ರಾಥಮಿಕ ವರದಿಯ ಪ್ರಕಾರ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ದೊರೆತಿದೆ.

Leave a Comment

Your email address will not be published. Required fields are marked *