ಸಮಗ್ರ ನ್ಯೂಸ್: ಲಘು ವಿಮಾನವೊಂದು ವಸತಿ ಪ್ರದೇಶದಲ್ಲಿ ಪತನಗೊಂಡು ಎಂಟು ಮಂದಿ ಮೃತಪಟ್ಟ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಇಲ್ಲಿನ ಮೆಡೆಲಿನ್ನ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆಗಿದ್ದ ಈ ವಿಮಾನದಲ್ಲಿ ಇಬ್ಬರು ಪೈಲೆಟ್ಗಳು ಮತ್ತು ಆರು ಮಂದಿ ಪ್ರಯಾಣಿಕರು ಇದ್ದರು.
ಏರ್ಪೋರ್ಟ್ನಿಂದ ಹೊರಟ ಕೆಲವೇ ಹೊತ್ತಲ್ಲಿ, ಸಮೀಪದ ವಸತಿ ಪ್ರದೇಶದಲ್ಲಿದ್ದ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಆ ಮನೆಯ ಕೊನೇ ಫ್ಲೋರ್ ಧ್ವಂಸಗೊಂಡಿದೆ. ಅದೃಷ್ಟಕ್ಕೆ ಮನೆಯಲ್ಲಿ ಇದ್ದವರಿಗಾಗಲೀ, ಪತನಗೊಂಡ ಸ್ಥಳದಲ್ಲಿ ಇದ್ದ ಇನ್ನಿತರರಿಗಾಗಲೀ ಯಾವುದೇ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.