ಸಿನಿಮಾ ಚಿತ್ರೀಕರಣದ ವೇಳೆ ಅವಘಡ|ಮೂಳೆ ಮುರಿತಕ್ಕೊಳಗಾದ ನವೀನ್ ಡಿ. ಪಡೀಲ್

ಸಮಗ್ರ ನ್ಯೂಸ್: ಸಿನಿಮಾ ಚಿತ್ರೀಕರಣದ ಸಂದರ್ಭ ತುಳು ರಂಗಭೂಮಿ, ಚಿತ್ರರಂಗದ ಖ್ಯಾತ ನಟ ಕುಸೇಲ್ದರಸೆ ನವೀನ್ ಡಿ.ಪಡೀಲ್ ಬಿದ್ದು ಗಾಯ ಮಾಡಿಕೊಂಡ ಘಟನೆ ನಿನ್ನೆ ಸಂಜೆ ಮಡಂತ್ಯಾರಿನಲ್ಲಿ ಸಂಭವಿಸಿದೆ.

Ad Widget ... ..

ತೊಡೆಯ ಭಾಗದಲ್ಲಿ ಮೂಳೆ ಮುರಿತಕ್ಕೊಳಗಾದ ಅವರು ನಗರದ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ಘಟನೆ ಸಂಭವಿಸಿದೆ. ನವೀನ್ ಡಿ. ಪಡೀಲ್ ಅನೇಕ ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಇತ್ತೀಚಿಗೆ ತೆರೆಕಂಡು ದಾಖಲೆ ನಿರ್ಮಿಸಿದ ‘ಕಾಂತಾರ’ ಚಿತ್ರದಲ್ಲೂ ನಟಿಸಿದ್ದಾರೆ. ಮಜಾ ಟಾಕೀಸ್ ಮೂಲಕ ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ.

Ad Widget

Leave a Comment

Your email address will not be published. Required fields are marked *