ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ಪರಸಂಗ ಮಾಡಿದವಳು ಬೀದಿ ಹೆಣವಾದಳು!!

ಸಮಗ್ರ ನ್ಯೂಸ್: ಮಹಿಳೆಗೆ ಮದುವೆಯಾಗಿ ಪತಿ ಮತ್ತು ಇಬ್ಬರು ಮಕ್ಕಳಿದ್ದರೂ ಪರಸಂಗದ ಸಹವಾಸ ಮಾಡಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ. ಇದರಿಂದ ಇಬ್ಬರು ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿವೆ.

Ad Widget ... ..

ಆಶಾ ಎನ್ನುವ ಮಹಿಳೆ ಕಳೆದ 12 ವರ್ಷದ ಹಿಂದೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮದ ನಿವಾಸಿಯನ್ನು ಮದುವೆಯಾಗಿದ್ದಳು. ಇವರಿಗೆ ಎರಡು ಮುದ್ದಾದ ಗಂಡು ಮಕ್ಕಳು ಕೂಡ ಇದ್ದರೂ ಸಹ ಪರಸಂಗ ಸಹವಾಸ ಮಾಡಿ ಈಗ ಹೆಣವಾಗಿದ್ದಾಳೆ.

Ad Widget

ಆಶಾ ಮದುವೆಗೂ ಮುನ್ನವೇ ಕುರುಬರಹಳ್ಳಿ ಗ್ರಾಮದ ವೆಂಕಟೇಶ್ ಎಂಬಾತ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಮದುವೆಯಾದರೂ ಕೂಡ ಸಂಬಂಧ ಮುಂದುವರೆಸಿದ್ದಾಳೆ.

ಹೀಗಿರುವಾಗ ಮೊನ್ನೆ ರಾತ್ರಿ ತನ್ನ ಮನೆಯ ಹಿಂದೆ ಇರುವ ಪ್ರಿಯಕರನ ಮನೆಗೆ ಅಡಿಕೆ ತರಲೂ ಹೋಗಿದ್ದಾಳೆ. ಈ ವೇಳೆ ಹಣಕಾಸು ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಗಲಾಟೆ ವೇಳೆ ವೆಂಕಟೇಶ್ ಆಶಾಳ ತಲೆಗೆ ಬಲವಾಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಬಳಿಕ ಮೃತದೇಹವನ್ನು ಪಕ್ಕದಲ್ಲಿ ಇದ್ದ ಹಳ್ಳಕ್ಕೆ ಎಸೆದು ಪರಾರಿಯಾಗಿದ್ದ ವೆಂಕಟೇಶ್​ನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.

Leave a Comment

Your email address will not be published. Required fields are marked *