ಮತ್ತೊಂದು ಮಹಾಮಾರಿಗೆ ಮುನ್ನುಡಿ? ರಾವಲ್ಪಿಂಡಿ ಬಳಿ ಹೊಸತೊಂದು ‌ವೈರಸ್ ಸೃಷ್ಟಿಸುತ್ತಿದೆ ಚೀನಾ!!

ಸಮಗ್ರ ನ್ಯೂಸ್: ಕೋವಿಡ್ ವೈರಸ್​ಗಿಂತಲೂ ಹೆಚ್ಚು ಮಾರಕವಾದ ವೈರಸ್​ಅನ್ನು ಪಾಕಿಸ್ತಾನದಲ್ಲಿ ಚೀನಾ ಸೃಷ್ಟಿಸುತ್ತಿದೆ ಎಂಬ ಕಳವಳಕಾರಿ ಅಂಶ ಬಹಿರಂಗವಾಗಿದೆ.

Ad Widget ... ..

ಕೋವಿಡ್ ಮತ್ತು ಅದರ ಪ್ರಭೇದಗಳು ಇನ್ನೂ ಜಗತ್ತನ್ನು ಕಾಡುತ್ತಿರುವುದರ ನಡುವೆಯೇ, ಪಾಕಿಸ್ತಾನ ಮತ್ತು ಚೀನಾ ರಾವಲ್ಪಿಂಡಿ ಸಮೀಪದ ರಹಸ್ಯ ಪ್ರಯೋಗಾಲಯವೊಂದರಲ್ಲಿ ಜೈವಿಕಾಸ್ತ್ರದ ಸಂಶೋಧನೆಯನ್ನು ಮುಂದುವರಿಸಿದೆ ಎನ್ನಲಾಗಿದೆ.

Ad Widget

ಕುಖ್ಯಾತ ವುಹಾನ್ ವೈರಾಣು ಸಂಸ್ಥೆ ಮತ್ತು ಪಾಕ್ ಸೇನೆ ನಡೆಸುವ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಎಸ್​ಟಿಒ) ಮಾರಕ ವೈರಸ್ ಸಂಶೋಧಿಸಲು ಅತ್ಯಂತ ಸುಧಾರಿತ ವೈಜ್ಞಾನಿಕ ಮೂಲಸೌಕರ್ಯವನ್ನು ಪಾಕ್​ನಲ್ಲಿ ಸ್ಥಾಪಿಸಿದೆ ಎಂದು ‘ಜಿಯೋ-ಪೊಲಿಟಿಕಾ’ ವರದಿ ಮಾಡಿದೆ. ಆ ಸ್ಥಳವನ್ನು ರಹಸ್ಯವಾಗಿಡಾಗಿದ್ದು ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ವರದಿ ಹೇಳಿದೆ.

Leave a Comment

Your email address will not be published. Required fields are marked *