ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯದ ಗೂನಡ್ಕದಲ್ಲಿ ಮತ್ತೊಬ್ಬ ವ್ಯಕ್ತಿಯ ಮನೆಗೆ ಎನ್ಐಎ ಪೊಲೀಸರು ನ.5ರಂದು ದಾಳಿ ನಡೆಸಿದ್ದಾರೆ.
ದಾಳಿಯಿಂದ ಮನೆಯನ್ನು ಗೂನಡ್ಕದ ಸಾಜಿದ್ ಐ ಜಿ ಯವರದು ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗತ್ಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಮುಂಜಾನೆಯಿಂದಲೇ ಹಲವರ ಬೇಟೆಗೆ ಇಳಿದ ಎನ್ಐಎ ಪೊಲೀಸರು ಎಸ್ಡಿಪಿಐ ಪ್ರಮುಖರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.