ಸುಳ್ಯ: ರಾತ್ರೋರಾತ್ರಿ ತಲೆ ಎತ್ತಿದ ವೈನ್ ಶಾಪ್| ಗ್ರಾಮೀಣ ಜನರಿಗೆ ಫುಲ್ ಶಾಕ್

ಸಮಗ್ರ ನ್ಯೂಸ್: ಹೋರಾಟಗಾರರು ನಮ್ಮೂರಲ್ಲಿ ಮದ್ಯದ ಅಂಗಡಿ ಬೇಡ ಎಂದು ಹೋರಾಟ, ಪ್ರತಿಭಟನೆ ಮಾಡುತ್ತಿರುವಾಗಲೇ ಪಕ್ಕದ‌ ಊರಲ್ಲಿ ರಾತ್ರೋರಾತ್ರಿ ವೈನ್ ಶಾಪ್ ಒಂದು ತಲೆ‌ ಎತ್ತಿದ್ದು‌‌ ಗ್ರಾಮಸ್ಥರು ಫುಲ್ ಶಾಕ್ ಅನುಭವಿಸಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನಲ್ಲಿ ನಡೆದಿದೆ.

. Ad Widget . Ad Widget

ಕಳೆದೆರಡು ವಾರಗಳ ಹಿಂದೆ ಕೊಲ್ಲಮೊಗ್ರುವಿಗೆ 6 ಕಿ.ಮೀ ದೂರವಿರುವ ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರು. ಗ್ರಾಮದ ಸಮಾನ ಮನಸ್ಕ ಜನರು ಒಟ್ಟಾಗಿ ಮದ್ಯದಂಗಡಿ ವಿರುದ್ದ ಮುಗಿಬಿದ್ದಿದ್ದರು. ಅದಾದ ಬಳಿಕ ಹರಿಹರ ಪಲ್ಲತ್ತಡ್ಕದಲ್ಲಿ ಮದ್ಯದಂಗಡಿ ತೆರೆಯುವ ವಿವಾದ ತಣ್ಣಗಾಯಿತು.

. Ad Widget . . Ad Widget . Ad Widget

ಈ ನಡುವೆ ಬೇರೆಯದ್ದೇ ಪರವಾನಗಿಯಲ್ಲಿ ರಾತ್ರೋರಾತ್ರಿ ಪಕ್ಕದ ಕೊಲ್ಲಮೊಗ್ರದಲ್ಲಿ ವೈನ್ ಶಾಪ್ ಒಂದು ತಲೆಎತ್ತಿದೆ. ಆದರೆ ಕೊಲ್ಲಮೊಗ್ರದಲ್ಲಿ ವೈನ್ ಶಾಪ್ ತೆರೆಯುವ ಬಗ್ಗೆ ಸ್ಥಳೀಯ ಪಂಚಾಯತ್ ನಿಂದ ಫರ್ಮಿಷನ್ ತೆಗೆದುಕೊಂಡಿಲ್ಲ. ಮೇಲಾಗಿ ಸ್ಥಳೀಯ ಪಂಚಾಯತ್ ಪಿಡಿಒ ಗೆ ಮಾಹಿತಿಯೇ ಇಲ್ಲ. ಹಾಗಾಗಿ ಇದೊಂದು ಅಕ್ರಮ ಮದ್ಯದಂಗಡಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಮದ್ಯದಂಗಡಿ ತೆರೆಯಲು ಸ್ಥಳೀಯ ರಾಜಕೀಯ ಮುಖಂಡರೇ ಕೈಜೋಡಿಸಿದ್ದಾರೆಂಬುದು ಗ್ರಾಮದ ಜನತೆಯ ಆರೋಪ. ಈ ವೈನ್ ಶಾಪ್ ವಿರುದ್ಧ ಗ್ರಾಮಸ್ಥರು ಹೋರಾಟ ಸಮಿತಿಯೊಂದು ರಚಿಸಿದ್ದು ಮತ್ತೊಂದು ಹೋರಾಟ ನಡೆಯುವ ಲಕ್ಷಣಗಳಿವೆ.

Leave a Comment

Your email address will not be published. Required fields are marked *