ಸುಳ್ಯ: ಪಿಡಿಓ ಕಂಡು ಪರಾರಿಯಾದ ಆಟಗಾರರು | ಬ್ಯಾಟ್ ಬಾಲ್ ವಶ

ಸುಳ್ಯ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮೈದಾನದಲ್ಲಿ, ಕ್ರಿಕೆಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಿಡಿಒ ದಾಳಿ ನಡೆಸಿದ್ದು, ಇದನ್ನರಿತ ಯುವಕರು ಸ್ಥಳದಿಂದ ಕಾಲ್ಕಿತ ಘಟನೆ ವರದಿಯಾಗಿದೆ.

Ad Widget ... ..

ಜಿಲ್ಲೆಯಲ್ಲಿ ಕ್ರಿಕೆಟ್, ವಾಲಿಬಾಲ್ ಆಡುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಠಾಣೆಗಳ ಸಿಬ್ಬಂದಿಗಳು ನಿಗಾ ವಹಿಸುವಂತೆ ಸೂಚಿಸಲಾಗಿತ್ತು.
ಈ ನಡುವೆ ಇದ್ಯವುದಕ್ಕೂ ಕ್ಯಾರೇ ಅನ್ನದೇ ನಿಯಮ ಉಲ್ಲಂಘಿಸಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯುವಕರು, ಬಾಲಕರು ಗುಂಪು ಸೇರಿ ಭರ್ಜರಿಯಾಗಿ ಕ್ರಿಕೆಟ್ ಆಟ ಆಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪಿಡಿಓ ದಾಳಿ ನಡೆಸಿ ಆಟಕ್ಕೆ ಬಳಸುತಿದ್ದ ಉಪಕರಣಗಳನ್ನು ಗುರುವಾರ ಸಂಜೆ ವಶಪಡಿಸಿಕೊಂಡಿದ್ದಾರೆ.

Ad Widget

ಕೊಲ್ಲಮೊಗ್ರು ಗ್ರಾಮದ ತೋಟದಮಜಲು, ಕಟ್ಟ, ಗಡಿಕಲ್ಲು ಸ್ಥಳದಲ್ಲಿ ಯುವಕರು ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದಾಗ ದಾಳಿ ನಡೆಸಲಾಗಿದ್ದು, ಗ್ರಾ.ಪಂ. ಪಿಡಿಒ ರವಿಚಂದ್ರ ಮತ್ತು ಸಿಬ್ಬಂದಿ ಸಂತೋಷ್ ಸ್ಥಳಕ್ಕೆ ತೆರಳಿದಾಗ ಯುವಕರು ಬ್ಯಾಟ್, ವಿಕೆಟ್, ಬಾಲ್ ಬಿಟ್ಟು ಎದ್ದು ಬಿದ್ದು ಓಡಿ ಹೋಗಿದ್ದಾರೆ.

Leave a Comment

Your email address will not be published. Required fields are marked *