Ad Widget .

ಬಂದರಿನಲ್ಲಿ‌ ಸರಕು ಇಳಿಸುವಾಗ ನೋಡನೋಡುತ್ತಿದ್ದಂತೆ ಮುಳುಗಿದ ಹಡಗು

ಸಮಗ್ರ ನ್ಯೂಸ್: ಸರಕು ಇಳಿಸುವಾಗ ಬೃಹತ್ ಹಡಗೊಂದು ಟರ್ಕಿ ಬಂದರಿನಲ್ಲಿ ಮುಳುಗಿರುವ ಘಟನೆ ಕಳೆದ ಶನಿವಾರ ನಡೆದಿದೆ. ಬಂದರಿಗೆ ಬಂದ ಸೀ ಈಗಲ್ ಎಂಬ ಹೆಸರಿನ ನೌಕೆಯಿಂದ ಹಲವಾರು ಕಂಟೇನರ್‌ಗಳನ್ನು ಹೊರ ತೆಗೆಯಲಾಗುತ್ತಿತ್ತು. ಈ ವೇಳೆ ನೌಕೆ ಮುಳುಗಲಾರಂಭಿಸಿದೆ. ಅದರ ದೃಶ್ಯಾವಳಿ ವೈರಲ್‌ ಆಗುತ್ತಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸೀ ಈಗಲ್ ನೌಕೆಯನ್ನು 1984 ರಲ್ಲಿ ನಿರ್ಮಿಸಲಾಗಿದೆ. 3120 ಡಿಡಬ್ಲ್ಯೂಟಿ ಸರಕು ಹಡಗು ಕೆಳಗಿಳಿದ ಸಂದರ್ಭದಲ್ಲಿ ಪೋರ್ಟ್ ಲಿಫ್ಟ್ ಟ್ರಕ್ ಕಂಟೈನರ್‌ಗಳನ್ನು ಇಳಿಸುವುವಾಗ ಮುಳುಗಲು ಪ್ರಾರಂಭಿಸಿದೆ. ಅಲ್ಲಿದ್ದ ಜನರು ಭಯಭೀತರಾಗಿ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು.

Ad Widget . Ad Widget . Ad Widget .

ಟರ್ಕಿಯ ಸಾರಿಗೆ ಮತ್ತು ಮೂಲಸೌಕರ್ಯ ಸಚಿವಾಲಯವು ಟ್ವೀಟ್‌ ಮಾಡಿದ್ದು, ಟೋಗೊ ಧ್ವಜದ ಹಡಗಿನಿಂದ 24 ಕಂಟೇನರ್‌ಗಳು ಕಳೆದುಹೋಗಿವೆ ಮತ್ತು ಸಣ್ಣ ತೈಲ ಸೋರಿಕೆ ಕೂಡ ಪತ್ತೆಯಾಗಿದೆ. ಅದೃಷ್ಟವಶಾತ್, ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಯಾವುದೇ ಗಾಯಗಳು ವರದಿಯಾಗಿಲ್ಲ.

Leave a Comment

Your email address will not be published. Required fields are marked *