47 ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಶ್ರುತಿ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಸ್ಟಾರ್ ಕಲಾವಿದರ ಹುಟ್ಟುಹಬ್ಬ. ವಿಷ್ಣುವರ್ಧನ್, ಉಪೇಂದ್ರ ಜೊತೆಗೆ ನಟಿ ಶ್ರುತಿ ಅವರದ್ದು ಇಂದೇ ಜನ್ಮದಿನ.

Ad Widget ... ..

ಸಿನಿಮಾದಲ್ಲಿ ತಂಗಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರುತಿ ಬಳಿಕ ಸ್ಯಾಂಡಲ್ ವುಡ್ ನ ನಂ.1 ನಟಿಯಾಗಿ ಜನಪ್ರಿಯ ಗಳಿಸಿದರು. ತಂಗಿಯಾಗಿ, ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ಹೆಂಗಳೆಯರ ಕಣ್ಣಲ್ಲಿ ನೀರು ತರಿಸುವಂತೆ ಅಭಿನಯಿಸುತ್ತಿದ್ದ ಅದ್ಭುತ ಕಲಾವಿದೆ ಶ್ರುತಿ.

Ad Widget

ರಾಮ್ ಕುಮಾರ್, ಶಶಿಕುಮಾರ್, ಸುನಿಲ್, ರಮೇಶ್ ಅರವಿಂದ್ ಮುಂತಾದ ಕಲಾವಿದರ ಜೊತೆಗೆ ಜನಪ್ರಿಯ ಜೋಡಿಯಾಗಿ ಕನ್ನಡಿಗರ ಮನ ಸೆಳೆದಿದ್ದ ನಟಿ ಶ್ರುತಿ ಇಂದು 47 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

Leave a Comment

Your email address will not be published. Required fields are marked *