ರಷ್ಯಾ ಅಧ್ಯಕ್ಷ ಪುಟಿನ್ ಕೊಲೆಯತ್ನ

ಸಮಗ್ರ ನ್ಯೂಸ್: ಅಪಘಾತ ಮಾಡಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಹತ್ಯೆಗೈಯ್ಯುವ ಯತ್ನ ನಡೆದಿತ್ತು ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

Ad Widget ... ..

ಪುಟಿನ್‌ ತಮ್ಮ ಲಿಮೋಸಿನ್‌ ಕಾರಿನಲ್ಲಿ ನಿವಾಸಕ್ಕೆ ಹಿಂದಿರುಗುತ್ತಿದ್ದ ವೇಳೆ ಕೊಲೆ ಯತ್ನ ನಡೆದಿದೆ.ಕಾರಿನ ಎಡಭಾಗದ ಮುಂಬದಿಯ ಚಕ್ರಕ್ಕೆ ವಾಹನವೊಂದು ಢಿಕ್ಕಿ ಹೊಡೆದಿದೆ. ಕಾರಿನ ಚಕ್ರದಲ್ಲಿ ಜೋರಾಗಿ ಶಬ್ದವಾಗಿ, ಹೊಗೆ ಎದ್ದಿತ್ತು. ಕೂಡಲೇ ಅಧ್ಯಕ್ಷರನ್ನು ಬಚಾವ್‌ ಮಾಡಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ಮೂಲಕ ಹತ್ಯೆ ಯತ್ನವನ್ನು ವಿಫ‌ಲಗೊಳಿಸಲಾಯಿತು ಎಂದು ವರದಿ ಹೇಳಿದೆ.

Ad Widget

ತಾವು ಕನಿಷ್ಠ 5 ಕೊಲೆ ಯತ್ನಗಳಿಂದ ಪಾರಾಗಿದ್ದಾಗಿ 2017ರಲ್ಲಿ ಪುಟಿನ್‌ ಹೇಳಿಕೊಂಡಿದ್ದನ್ನು ಇಲ್ಲಿ ‌ಸ್ಮರಿಸಬಹುದು.

Leave a Comment

Your email address will not be published. Required fields are marked *