ವಿದ್ಯುತ್ ಶಾಕ್: ನಿವೃತ್ತ ಶಿಕ್ಷಕ ಮೃತ್ಯು

ಕಾಸರಗೋಡು: ಮೋಟಾರ್ ಪಂಪ್ ಚಾಲೂ ಮಾಡುವಾಗ ವಿದ್ಯುತ್ ಶಾಕ್ ತಗಲಿ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ಜಿಲ್ಲೆಯ ಮಧೂರು ರಸ್ತೆಯ ಕೂಡ್ಲು ಎಂಬಲ್ಲಿ ನಡೆದಿದೆ.

Ad Widget ... ..


ಕೂಡ್ಲು ನಿವಾಸಿ ಮುರಳೀಧರ (೫೭) ಮೃತ ಶಿಕ್ಷಕ. ಇವರು ಪಟ್ಲ ಸರಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಒಂದು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಇಂದು ಮಧ್ಯಾಹ್ನ ಮೋಟಾರ್ ಪಂಪ್ ಚಾಲೂ ಮಾಡುತ್ತಿದ್ದಾಗ ಶಾಕ್ ತಗಲಿ ಈ ದುರ್ಘಘಟನೆ ಸಂಭವಿಸಿದೆ.
ಶಾಕ್ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಮುರಲೀಧರ ಅವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕರೆತಂದಿದ್ದು ಆಗಲೇ ಮೃತಪಟ್ಟಿದ್ದರು.

Ad Widget

ಚೆರ್ಕಳ ನಿವಾಸಿಯಾಗಿದ್ದ ಮುರಳೀಧರ ಅವರು ಕೆಲ ಸಮಯಗಳಿಂದ ಕೂಡ್ಲುವಿನಲ್ಲಿ ವಾಸವಾಗಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *