ನವೀಕೃತ ‘ಸೆಂಟ್ರಲ್ ವಿಸ್ತಾ’ ಇಂದು ಉದ್ಘಾಟನೆ| ಕರ್ತವ್ಯ ಪಥಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ನವೀಕೃತ ಸೆಂಟ್ರಲ್ ವಿಸ್ತಾದ ಕೆಲವು ಭಾಗ, ಕರ್ತವ್ಯ ಪಥ ಹಾಗೂ ಇಂಡಿಯಾ ಗೇಟ್ ಸನಿಹ ಪ್ರತಿಸ್ಠಾಪಿಸಲಾಗಿರುವ ನೇತಾಜಿ ಸಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು, ಇಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ.

Ad Widget ... ..

ನವೀಕೃತ ಸೆಂಟ್ರಲ್ ವಿಸ್ತಾ ಬಹುತೇಕ ಸಿದ್ಧವಾಗಿದ್ದು, ಮೋದಿ ವಿಜಯ್ ಚೌಕ್ ನಿಂದ ಇಂಡಿಯಾ ಗೇಟ್ ವರೆಗಿನ ಭಾಗವನ್ನು ಇಂದು ಉದ್ಘಾಟಿಸಲಿದ್ದಾರೆ. ಈ ನವೀಕೃತ ಸೆಂಟ್ರಲ್ ವಿಸ್ತಾದಲ್ಲಿ ರಾಜ್ಯವಾರು ಆಹಾರ ಮಳಿಗೆಗಳು, ಕೆಂಪು ಗ್ರಾನೈಟ್ ಪಾದಚಾರಿ ಮಾರ್ಗಗಳು, ಸುತ್ತಲೂ ಹಸಿರು ಉದ್ಯಾನವನಗಳು ಪ್ರಮುಖ ಆಕರ್ಷಣೆಯಾಗಿವೆ. ಇಂದು ಪ್ರಧಾನಿ ಮೋದಿ ನವೀಕೃತ ಸೆಂಟ್ರಲ್ ವಿಸ್ತಾ ಉದ್ಘಾಟಿಸಿದ ಬಳಿಕ ಸಾರ್ವಜನಿಕರು ಮುಕ್ತವಾಗಿ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

Ad Widget

Leave a Comment

Your email address will not be published. Required fields are marked *