ಮಡಿಕೇರಿ; ಕೆಎಸ್ ಆರ್ ಟಿಸಿ ಬಸ್ ರಸ್ತೆ ಬದಿ ಉರುಳಿ ಬಿದ್ದು, 21 ಪ್ರಯಾಣಿಕರಿಗೆ ಗಾಯ

ಮಡಿಕೇರಿ : ಮೈಸೂರಿಗೆ ತೆರಳುತ್ತಿದ ಕೆಎಸ್ಸಾರ್ಟಿಸಿ ಬಸ್ ಇಲ್ಲಿನ ಬೋಯಿಕೇರಿ ಬಳಿಯ ರಸ್ತೆ ಬದಿ ಉರುಳಿ ಬಿದ್ದ ಪರಿಣಾಮ 21 ಪ್ರಯಾಣಿಕರು ಗಾಯಗೊಂಡಿದ್ದಾರೆ.

Ad Widget ... ..

ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಬಸ್‌ ಗೆ ಬೋಯಿಕೇರಿ ತಿರುವಿನಲ್ಲಿ ಮಡಿಕೇರಿ ಕಡೆ ಬರುತ್ತಿದ್ದ ಬೈಕ್‌ ಅಡ್ಡ ಬಂದ ಪರಿಣಾಮ ಬಸ್ ನ ಚಕ್ರಕ್ಕೆ ಬೈಕ್ ಸಿಲುಕಿ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ.

Ad Widget

ಸದ್ಯ ಬೈಕ್ ಸವಾರ ಸಣ್ಣ ಪುಟ್ಟಗಾಯಗಳಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಡಿಕೇರಿ ಗ್ರಾಮಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *