ಬೆಳ್ತಂಗಡಿ: ಅಪ್ರಾಪ್ತೆಯ ಮನೆಯಲ್ಲಿ ನೈಟ್ ಡ್ಯೂಟಿ ಮಾಡ್ತಿದ್ದ ಯುವಕ| ಕಾದು ಕುಳಿತು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು!!

ಸಮಗ್ರ ನ್ಯೂಸ್: ಮನೆಗೆ ರಾತ್ರಿ ಬಂದ ಯುವಕ ಅಪ್ರಾಪ್ತ ಸ್ನೇಹಿತೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದು, ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾದ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ‌ ನಡೆದಿದೆ.

Ad Widget ... ..

ನಿಡ್ಲೆ ಕುದ್ರಾಯ ಸಮೀಪ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಬೈಕ್ ನಿಲ್ಲಿಸಲಾಗುತ್ತಿದ್ದ ವ್ಯಕ್ತಿ ಯಾರು ಎಂಬುದು ಇಲ್ಲಿನ ಸ್ಥಳೀಯರ ಬಹುದೊಡ್ಡ ಪ್ರಶ್ನೆಯಾಗಿತ್ತು. ಅಲ್ಲದೇ ಅಕ್ರಮ ಸಂಬಂಧ ಎಂಬ ಸುದ್ದಿ ಹಬ್ಬಿದ್ದು ಸ್ಥಳೀಯ ಕೆಲ ಕೆಂಪು ಬೈಕು ಹೊಂದಿದವರ ಮೇಲೆ ಅನುಮಾನದ ಮಾತುಗಳು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಬೈಕ್ ಇದ್ದದ್ದನ್ನು ಗಮನಿಸಿದ ಸ್ಥಳೀಯರು, ಆತ ಯಾರು ಎಂದು ತಿಳಿಯಲು ರಾತ್ರಿ ಕಾದು ಮುಂಜಾನೆ 5ರ ವೇಳೆಗೆ ಆತನನ್ನು ಹಿಡಿದಿದ್ದಾರೆ.

Ad Widget

ಇನ್ನು ಧರ್ಮಸ್ಥಳ ಸಮೀಪದ ಅಶೋಕನಗರದ ನಿವಾಸಿಯಾಗಿರುವ ಈ ಯುವಕ, ತನ್ನ ಸ್ನೇಹಿತೆ ಅಪ್ರಾಪ್ತ ಬಾಲಕಿಯೋರ್ವಳೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದೆ.

ಅಲ್ಲದೇ ಆತ ತಡರಾತ್ರಿ ಸ್ನೇಹಿತೆಯ ಮನೆಗೆ ಬಂದು ಮನೆಯವರಿಗೆ ತಿಳಿಯದಂತೆ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದ, ಇದನ್ನು ಕಂಡ ಸ್ಥಳೀಯರು ಆತನನ್ನು ಹಿಡಿದಿದ್ದಾರೆ.
ಸದ್ಯ ಬಾಲಕಿಯ ಕಡೆಯವರ ದೂರಿನ ಹಿನ್ನಲೆಯಲ್ಲಿ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *