Ad Widget .

ಮಂಗಳೂರು: ಮೋದಿ ಕಾರ್ಯಕ್ರಮದತ್ತ ಸರ್ಕಾರಿ ‌ಬಸ್ ಗಳು| ರಸ್ತೆಯಲ್ಲೇ ಬಾಕಿಯಾದ ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು

ಸಮಗ್ರ ನ್ಯೂಸ್: ಮಂಗಳೂರಿಗೆ ಪ್ರಧಾನಿ ಮೋದಿ‌ ಆಗಮಿಸಲಿರುವ ಕಾರಣ ಸರ್ಕಾರಿ ಬಸ್ ಗಳನ್ನು ಮಂಗಳೂರಿನತ್ತ ಬುಕ್ಕಿಂಗ್ ಮಾಡಲಾಗಿದ್ದು, ನಿತ್ಯ ಪ್ರಯಾಣಿಸುವ ಪ್ರಯಾಣಿಕರು, ಸಾರ್ವಜನಿಕರು,
ಶಾಲಾ ಮಕ್ಕಳು ಬಸ್ಸಿಲ್ಲದೆ ಪರದಾಡಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳು ಶಾಲೆಗೆ ಹೋಗಬೇಕಾದರೆ ಸರಕಾರಿ ಬಸ್ ಗಳು ಅವಶ್ಯಕವಾಗಿದ್ದು, ಇಂದು ದ.ಕ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪರದಾಟ ನಡೆಸಿದರು.

Ad Widget . Ad Widget . Ad Widget .

ಶಾಲಾ ಮಕ್ಕಳು ಬಸ್ ಪಾಸ್ ಮಾಡಿಸಿದ್ದು ದಿನಾ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದರು. ಆದರೆ ಇಂದು ಬಸ್ ಗಳಿಲ್ಲದ ಕಾರಣ ಅತ್ತ ಶಾಲೆಗೂ ಹೋಗಲಾರದೆ ಮನೆಯಲ್ಲೂ ಉಳಿಯಲಾಗದೆ ಸರ್ಕಾರದ ವ್ಯವಸ್ಥೆಗೆ ಛೀಮಾರಿ ಹಾಕಿದರು.

ಇಂದು ಪ್ರಧಾನಿ ಮಂಗಳೂರಿಗೆ ಆಗಮಿಸುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಿಂದ 2000 ಬಸ್ಸುಗಳನ್ನು ಸಮಾವೇಶಕ್ಕೆ ಆಗಮಿಸುವವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೆಲವೆಡೆ ರಿಕ್ಷಾ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ಜನತೆ ತೆರಳಿದರೆ ಮಾಹಿತಿ ಇಲ್ಲದ ಹಲವು ಮಂದಿ ರಸ್ತೆಯಲ್ಲೇ ಕಾದು ಕಾದು ಸುಸ್ತಾಗಿದ್ದರು. ಕೊನೆಯ ಪಕ್ಷ ಶಾಲಾ ಮಕ್ಕಳ ಪ್ರಯಾಣಕ್ಕಾದರೂ ಬಸ್ ಗಳನ್ನು ಇರಿಸಬೇಕಿತ್ತು. ಎಲ್ಲಾ ಬಸ್ ಗಳನ್ನು ಯಾಕೆ ಕಳುಹಿಸಬೇಕಿತ್ತು ಎಂಬ ಮಾತುಗಳು ಕೇಳಿಬಂದಿವೆ.

Leave a Comment

Your email address will not be published. Required fields are marked *