ಮಂಗಳೂರು ಬೀಚ್ ಗೆ ಬರುವ ಪ್ರವಾಸಿಗರಿಗೆ ಮಹತ್ವದ ಆದೇಶ

ಮಳೆಯ ಅರ್ಭಟಕ್ಕೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನೀರಿಗೆ ಇಳಿಯದಂತೆ ಮಂಗಳೂರು ಬೀಚ್‌ ಅಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿದೆ. ದೂರದಿಂದಲೆ ಸಮುದ್ರವನ್ನು ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.

. Ad Widget . Ad Widget . Ad Widget .

ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ.15ರ ವರಗೆ ಯಾವುದೇ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರುತ್ತದೆ. ಈ ಸಮಯದಲ್ಲಿ ಯಾವುದೇ ವಾಟರ್ ಸ್ಪೋರ್ಟ್ಸ್ ನಡೆಸಲು ಅನುಮತಿ ಇರುವುದಿಲ್ಲ. ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್‌ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಮುಂದೆ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗಿಳಿಯಲು ಬಿಡಲಾಗುವುದು ಎಂದು ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಅವರು ತಿಳಿಸಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಕಡಲತೀರದಲ್ಲಿ ಇದೀಗ ಮಳೆಗಾಲದಲ್ಲೂ ವಾರಾಂತ್ಯದಲ್ಲಿ ಜನಸಂದಣಿ ಕಂಡು ಬರುತ್ತಿದ್ದು ಬೀಚ್‌ ಅಭಿವೃದ್ಧಿ ಸಮಿತಿ ಮಾತ್ರ ಯಾರನ್ನೂ ನೀರಿಗೆ ಇಳಿಯದಂತೆ ಎಚ್ಚರ ವಹಿಸುತ್ತಿದೆ. ಹಾಗಾಗಿ ಬಂದ ಪ್ರವಾಸಿಗರು ದೂರದಲ್ಲೇ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಮೂಲಗಳ ಪ್ರಕಾರ ಸೆ. 10ರ ವರೆಗೆ ಈ ನಿರ್ಭಂಧ ಮುಂದುವರಿಯುವ ಸಾಧ್ಯತೆ ಇದೆ. ಮುಂದೆ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗಿಳಿಯಲು ಬಿಡಲಾಗುವುದು ಎಂದು ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *