ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾದ ವಾಟ್ಸ್ ಆಪ್ ಚಾಟ್ ! ವಿಮಾನ ಸ್ಥಗಿತ

ಸಮಗ್ರ ನ್ಯೂಸ್: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಬ್ಬರು ಯುವಕ-ಯುವತಿಯರು ಮಾಡುತ್ತಿದ್ದ ವಾಟ್ಸಾಪ್ ಚಾಟಿಂಗ್ ಆತಂಕ ಹುಟ್ಟಿಸಿತ್ತು. ರನ್ ವೇನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ.

Ad Widget ... ..

ಇದೇ ಕಾರಣದಿಂದಾಗಿ ಇನ್ನೇನು ಮುಂಬೈಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನವನ್ನು ಸ್ಥಗಿತಗೊಳಿಸಿದ ಘಟನೆ ನಡೆದಿದೆ.

Ad Widget

ಇಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದಂತ ಇಬ್ಬರು ಯುವಕ-ಯುವತಿಯರು ಪರಸ್ಪರ ಚಾಟಿಂಗ್ ಮಾಡಿಕೊಂಡಿದ್ದರು. ಯುವತಿ ಬೆಂಗಳೂರಿಗೆ, ಯುವಕ ಮುಂಬೈಗೆ ತೆರಳೋದಕ್ಕೆ ಆಗಮಿಸಿದ್ದರು. ಯುವತಿ ನಿಲ್ದಾಣದಲ್ಲಿಯೇ ಯುವಕನೊಂದಿಗೆ ವಾಟ್ಸಾಪ್ ಚಾಟಿಂಗ್ ನಲ್ಲಿ ತೊಡಗಿದ್ದಳು. ಈ ವೇಳೆ ವಿಮಾನದ ಭದ್ರತೆಯ ಬಗ್ಗೆಯೂ ಚಾಟಿಂಗ್ ಮಾಡುತ್ತಿದ್ದುದನ್ನು ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ.

ಈ ಬಗ್ಗೆ ಕೂಡಲೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಆಗ ಇನ್ನೇನು ಮುಂಬೈಗೆ ಮಂಗಳೂರು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದಂತ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಗಿತಗೊಳಿಸಿದ್ದಾರೆ‌.
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಯುವಕ-ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವು ತಮಾಷೆಯಾಗಿ ಚಾಟಿಂಗ್ ಮಾಡಿದ್ದಾಗಿ ಹೇಳಿದ್ದಾರೆ. ಈ ಬಳಿಕ ವಿಮಾನವನ್ನು ಟೇಕ್ ಆಫ್ ಗೆ ಅವಕಾಶ ನೀಡಲಾಗಿದೆ.

Leave a Comment

Your email address will not be published. Required fields are marked *