ತುಳು ಭಾಷೆ ಬಗ್ಗೆ ತುಚ್ಛ ಭಾವನೆ: ಉಪ್ಪಿನಂಗಡಿ ಕಾಲೇಜು ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಗರಂ

ಸಮಗ್ರ ನ್ಯೂಸ್: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶೇಖರ ಎಂ.ಬಿ. ಅವರು ತುಳು ಭಾಷೆಯ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ ಘಟನೆ ಆ.8ರಂದು ನಡೆದಿದೆ.

Ad Widget ... ..

ಕಳೆದ ಆ.5 ಮತ್ತು ಆ.8ರಂದು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ವತಿಯಿಂದ ಕಾಲೇಜಿನಲ್ಲಿ ‘ತುಳುನಾಡ ಐಸಿರಿ’ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭ ಕಾಲೇಜಿನ ಪ್ರಾಚಾರ್ಯರಾದ ಶೇಖರ ಎಂ.ಬಿ. ಅವರು ತುಳು ಭಾಷೆಯ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜಿನ ವರಾಂಡದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

Ad Widget

Leave a Comment

Your email address will not be published. Required fields are marked *