ಕರಾವಳಿಗರೇ ಎಚ್ಚರ; ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಮಳೆ ಮತ್ತು ಮುಂದಿನ 48 ಗಂಟೆಗಳ ಹವಾಮಾನ ವರದಿ ಪ್ರಕಾರ ನೈರುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕಾಗಿದೆ . ನಿನ್ನೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ . ಅತಿ ಭಾರಿ ಮಳೆಯ ಪ್ರಮಾಣ ಉಡುಪಿ ಜಿಲ್ಲೆ ಕೊಲ್ಲೂರು , ಕೊಡಗು ಜಿಲ್ಲೆಯ ಭಾಗಮಂಡಲ ತಲಾ 16 ಸೆ . ಮಿ ಮಳೆ ದಾಖಲಾಗಿದೆ .

Ad Widget ... ..

ಭಾರಿ ಮಳೆಯ ಪ್ರಮಾಣ ಕ್ಯಾಸಲ್ ರಾಕ್ , ಸಿದ್ದಾಪುರ , ಉಡುಪಿ , ಮೂರ್ನಾಡು ಕೊಡಗು ಜಿಲ್ಲೆ ತಲಾ 11 ಸೆ . ಮಿ , ನಿಲ್ಕುಂದ್ , ಕೋಟ , ಮಂಗಳೂರು ವಿಮಾನ ನಿಲ್ದಾಣ , ಸೋಮವಾರಪೇಟೆ ತಲಾ 10 ಸೆ . ಮೀ , ಪಣಂಬೂರು , ಧರ್ಮಸ್ಥಳ , ಬೆಳ್ತಂಗಡಿ , ಸಿದ್ದಾಪುರ , ಕುಂದಾಪುರ , ನಾಪೋಕ್ಲು ತಲಾ 9 ಸೆ . ಮಿ . ಹೊನ್ನಾವರ , ಪುತ್ತೂರು , ಕಳಸ , ಕೊಪ್ಪ , ಹುಂಚದಕಟ್ಟೆ ತಲಾ 8 ಸೆ . ಮಿ ಮಳೆಯಾಗಿದೆ .

Ad Widget

ಮುಂದಿನ 24 ಘಂಟೆಗಳು ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆ / ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ . ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದೆ . ಕಾವೇರಿ ನದಿ ದಂಡೆಯ ರಾಮನಾಥಪುರ ಗ್ರಾಮದಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ . ಮಳೆಯ ಪ್ರಮಾಣ ಹೆಚ್ಚಾಗಿ ರಾಜಕಾಲುವೆ ಬಂದ್ ಆಗಿದ್ದರಿಂದ ಮನೆಗಳಿಗೆ ಮಳೆನೀರು ನುಗ್ಗಿದೆ .

ಕರಾವಳಿಯಲ್ಲಿ ‌ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಹವಾಮಾನ ಇಲಾಖೆ ‌ಎಚ್ಚರದಿಂದಿರಲು ಸೂಚಿಸಿದೆ.

Leave a Comment

Your email address will not be published. Required fields are marked *