ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ

ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಮಾಡಿ ಜೈಲಿಗೆ ಹಾಕಿ : ಬೋಜೇಗೌಡ

Ad Widget ... ..

ಚಿಕ್ಕಮಗಳೂರು : ಒಳಚರಂಡಿ ಕಾಮಗಾರಿ ವಿಳಂಬ ಹಿನ್ನೆಲೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡರಿಂದ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

Ad Widget

ಅಮೃತ್ ಯೋಜನೆ ಹಾಗೂ ಒಳಚರಂಡಿ ಕಾಮಗಾರಿ ಮಾಡಲಾಗಿದ್ದು ಈ ಕಾಮಗಾರಿ ಕಳೆದ ನವಂಬರ್ ನಲ್ಲಿ ಮುಗಿಯಬೇಕಿತ್ತು, ಆದರೆ ಆಗಸ್ಟ್ ಬಂದರು ಕಾಮಗಾರಿ ಮುಗಿಸದ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ನಿಮಗೆ ಮಾನ ಮರ್ಯಾದೆ ಇದ್ಯಾ? ಕಂಟ್ರಾಕ್ಟರ್ ನ ಬ್ಲಾಕ್ ಲಿಸ್ಟಿಗೆ ಹಾಕಿ ಜೈಲಿಗೆ ಕಳಿಸಿ, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರನ್ನು ಜೈಲಿಗೆ ಹಾಕಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಲ್ಲದೆ ಕಾಮಗಾರಿಯ ಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *