ದಿನವಿಡೀ ಕೆಲಸ, ಒಂದೊಂದು ಟೆನ್ಶನ್, ಇದೆಲ್ಲಾ ಕಳೆದು ರಾತ್ರಿ ವೇಳೆ ಹಾಸಿಗೆಗೆ ಹೋಗುವುದು ಆರಾಮದಾಯಕವಾಗಿರುತ್ತದೆ. ಎಲ್ಲರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಎಂದು ಬಯಸುತ್ತಾರೆ. ನಿದ್ರೆ ಮಾಡಲು ದಿಂಬು ಅತಿ ಅವಶ್ಯಕ. ದಿಂಬು ಒಬ್ಬೊಬ್ಬರು ಒಂದೊಂದು ರೀತಿ ಕೊಳ್ಳುತ್ತಾರೆ. ಆದರೆ ಇಲ್ಲಿದೆ ಒಂದು ಅಪರೂಪದ ದಿಂಬು
ವಿಶ್ವದ ಅತ್ಯಂತ ದುಬಾರಿ ದಿಂಬನ್ನು ನೆದರ್ಲೆಂಡ್ಸ್‌ನ ಫಿಸಿಯೋಥೆರಪಿಸ್ಟ್ ರಚಿಸಿದ್ದಾರೆ. ಹದಿನೈದು ವರ್ಷಗಳ ಕಠಿಣ ಪರಿಶ್ರಮದ ನಂತರ ಈ ದಿಂಬನ್ನು ವಿನ್ಯಾಸಗೊಳಿಸಲಾಗಿದೆ.
ಒಂದು ದಿಂಬಿಗೆ 57,000 ಡಾಲರ್‌ಗಳು, ಸರಿಸುಮಾರು 45 ಲಕ್ಷ ರೂ ಆಗಿದೆ. ದಿಂಬನ್ನು ನೀಲಮಣಿ, ಚಿನ್ನ ಮತ್ತು ವಜ್ರದಿಂದ ಹೊದಿಸಲಾಗಿದೆ. ಅದರೊಳಗೆ ತುಂಬಿದ ಹತ್ತಿಯು ರೋಬೋಟಿಕ್ ಮಿಲ್ಲಿಂಗ್ ಯಂತ್ರದಿಂದ ಬಂದಿದೆ. ಈ ದಿಂಬಿನ ಜಿಪ್ ನಲ್ಲಿ ನಾಲ್ಕು ವಜ್ರಗಳಿವೆ.
ಈ ದಿಂಬಿನ ಡೆವಲಪರ್ ಮೂಲಕ ನಿದ್ರಾಹೀನತೆಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ ದಿಂಬು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಅನುಕೂಲ ಮಾಡುತ್ತದೆ. ಈ ದಿಂಬನ್ನು ಹೈಟಕ್ ಪರಿಹಾರಗಳು ಮತ್ತು ವಿಂಟೇಜ್ ಕರಕುಶ ವಸ್ತುಗಳಿಂದ ಮಾಡಲಾಗಿದೆ.







