ಮಂಗಳೂರು: ಖಾಸಗಿ ಬಸ್ ನಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿನಿಯರು| ‘ಹಿಡಿತ ತಪ್ಪಿದರೆ ಜೀವಕ್ಕೆ ಕಂಟಕ’ – ಅಪಾಯಕಾರಿ ಪ್ರಯಾಣದ ವಿಡಿಯೋ ವೈರಲ್

ಸಮಗ್ರ ನ್ಯೂಸ್: ತುಂಬಿ ತುಳುಕುವ ಖಾಸಗಿ ಬಸ್ ನ ಪುಟ್ ಬೋರ್ಡಿನಲ್ಲಿ ವಿದ್ಯಾರ್ಥಿನಿಯರು ನೇತಾಡಿಕೊಂಡು ಅಪಾಯಕಾರಿ ಪ್ರಯಾಣಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

Ad Widget ... ..

ಎಲ್ಲರಿಗೂ ಉದ್ಯೋಗ, ಶಾಲಾ ಕಾಲೇಜಿಗೆ ಹೋಗುವ ಧಾವಂತ, ಆದರೆ ಇರೋ ಬೆರಳೆಣಿಕೆ ಬಸ್ಸಿನಲ್ಲಿ ಜೀವ ಪಣಕ್ಕಿಟ್ಟು ಪ್ರಯಾಣಿಸುವ ಅನಿವಾರ್ಯತೆ. ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೂ, ಎಚ್ಚರಿಕೆ ವಹಿಸಬೇಕಾಗಿದ್ದ ಬಸ್ ನಿರ್ವಾಹಕನೇ ವಿದ್ಯಾರ್ಥಿನಿಯರನ್ನು ತುಂಬಿ ಪುಟ್ ಬೋರ್ಡಿನಲ್ಲಿ ನೇತಾಡಿಸಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋ ತುಣುಕಿನಲ್ಲಿದೆ.

Ad Widget

ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ ಒಂದೆಡೆಯಾದರೆ , ಜೀವದ ಜೊತೆ ನಿರ್ಲಕ್ಷ್ಯ ವಹಿಸುವುದು ಈ ವಿಡಿಯೋದಲ್ಲಿ ಕಂಡುಬರುತ್ತದೆ.

ಮೇಲ್ನೋಟಕ್ಕೆ ನಗರದಿಂದ ಸಂಚರಿಸುವ ಖಾಸಗಿ ಬಸ್ ನಂತೆ ಕಂಡುಬಂದಿದ್ದು, ಘಟನೆ ನಡೆದ ಸ್ಥಳ ದಿನದ ಬಗ್ಗೆ ಸ್ಪಷ್ಟತೆ ಇಲ್ಲ .ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಪ್ರಯಾಣಿಸುವಾಗ ಒಂದೇ ಒಂದು ಹಿಡಿತ ತಪ್ಪಿದರೆ ಅದೆಷ್ಟೋ ವಿದ್ಯಾರ್ಥಿ ವಿದ್ಯಾರ್ಥಿನಿಗಳ ಜೀವಕ್ಕೆ ಮಾರಕವಾಗುವ ಸಾಧ್ಯತೆ ಇದೆ.

ಸಂಬಂಧಪಟ್ಟ ಅಧಿಕಾರಿಗಳು ಬಸ್ ಮಾಲೀಕ – ಚಾಲಕ -ನಿರ್ವಾಹಕ ವಿರುದ್ದ ಕ್ರಮ ಕೈಗೊಳ್ಳುವ ಮೊದಲು ಪ್ರಯಾಣಿಕರ ಬೇಡಿಕೆ, ಸಮಸ್ಯೆ, ಹೆಚ್ಚುವರಿ ಬಸ್ಸುಗಳ ಬಗ್ಗೆಯೂ ಗಮನಹರಿಸುವುದು ಒಳಿತು.

Leave a Comment

Your email address will not be published. Required fields are marked *