Ad Widget .

ಮಧ್ಯರಾತ್ರಿ ಹೀರೋ ಮನೆಗೆ ಕರೆದರೆ ಹೋದರೆ ಮಾತ್ರ ಸಿನಿಮಾದಲ್ಲಿ ಹೀರೋಯಿನ್|ಬಾಲಿವುಡ್ ನ ಕೊಳಕು ಸ್ಥಿತಿಯ ಬಗ್ಗೆ ಮಾತನಾಡಿದ ಮಲ್ಲಿಕಾ ಶರಾವತ್

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಿನಿಮಾ ಸಮಾಚಾರ: ಮಧ್ಯರಾತ್ರಿ ಹೀರೋ ಮನೆಗೆ ಕರೆದರೆ ಹೋದರೆ ಮಾತ್ರ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟನೆ ಮಾಡಲು ಅವಕಾಶ, ಎಂದು ಬಾಲಿವುಡ್ ನ ಕೊಳಕು ಸ್ಥಿತಿಯ ಬಗ್ಗೆ ಮಲ್ಲಿಕಾ ಶರಾವತ್ ಮಾತನಾಡಿದ್ದಾರೆ.

Ad Widget . Ad Widget . Ad Widget .

ಮರ್ಡರ್ ಸಿನಿಮಾದ ಮೂಲಕ ರಾತ್ರೋ ರಾತ್ರಿ ಸಂಚಲನ ಮೂಡಿಸಿದ ನಟಿ ಮಲಿಕಾ ಶೆರಾವತ್ ಆಗೋಮ್ಮೆ ಈಗೊಮ್ಮೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೂರು ವರ್ಷಗಳ ಬಳಿಕ ಮಲ್ಲಿಕಾ ಕಾಣಿಸಿಕೊಂಡಿರುವ ಆರ್ ಕೆ ಸಿನಿಮಾ ಜುಲೈ 22ರಂದು ಬಿಡುಗಡೆಯಾಗಿ ಸಿನಿ ರಸಿಕರ ಮನ ಗೆದಿದೆ.

ಈ ಮಧ್ಯೆ ಮಲ್ಲಿಕಾ ಬಾಲಿವುಡ್ ನ ಕೊಳಕು ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಮಲ್ಲಿಕಾ ಬಳಿಕ ಸೈಲೆಂಟ್ ಆಗಿ ಬಿಟ್ಟರು. ತಮಗೆ ಸಿನಿಮಾದಲ್ಲಿ ಅವಕಾಶ ಸಿಗದಿದ್ದಕ್ಕೆ ಕಾರಣವನ್ನು ಮಲ್ಲಿಕಾ ತಿಳಿಸಿದ್ದಾರೆ. ಕಾಸ್ಟಿಂಗ್​ ಕೌಚ್ ​ ಪಿಡುಗಿನ ಬಗ್ಗೆ ಈಗಾಗಲೇ ಅನೇಕ ನಟಿಯರು ಮಾತನಾಡಿದ್ದಾರೆ. ಮಲ್ಲಿಕಾ ಶೆರಾವತ್​ ಅವರು ಇನ್ನಷ್ಟು ವಿವರಗಳನ್ನು ತೆರೆದಿಟ್ಟಿದ್ದಾರೆ.

ಎಲ್ಲಾ ಎ-ಲಿಸ್ಟರ್ ನಾಯಕರು ನನ್ನೊಂದಿಗೆ ಸಿನಿಮಾ ಮಾಡಲು ನಿರಾಕರಿಸಿದರು. ಏಕೆಂದರೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು. ‘ಇದು ತುಂಬಾ ಸಿಂಪಲ್, ಅವರು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಮಾತ್ರ ಅವರು ಇಷ್ಟಪಡುತ್ತಾರೆ. ಆದರೆ ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ’ ಎಂದು ಮಲ್ಲಿಕಾ ಹೇಳಿದರು.

ರಾಜಿ ಮಾಡಿಕೊಳ್ಳುವುದು ಎಂದರೆ ಏನು ಅಂತ ಕೇಳಿದ ಪ್ರಶ್ನೆಗೆ ಮಲ್ಲಿಕಾ, ‘ಕುಳಿತುಕೊಳ್ಳಿ, ನಿಲ್ಲು ಎಂದರೆ ಹಾಗೆ ಮಾಡಬೇಕು. ಮಧ್ಯರಾತ್ರಿ ಅಥವಾ ಮುಂಜಾನೆ 3 ಗಂಟೆಗೆ ಹೀರೋ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಹೇಳಿದರೆ, ನೀವು ಆ ವಲಯದಲ್ಲಿ ಇದ್ದರೆ ಮತ್ತು ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಬೇಕು. ಒಂದು ವೇಳೆ ನೀವು ಹೋಗದಿದ್ದರೆ, ನೀವು ಸಿನಿಮಾದಿಂದ ಔಟ್ ಆಗುತ್ತೀರಿ’ ಎಂದು ಸ್ಟಾರ್ ಹೀರೋಗಳ ವಿರುದ್ಧ ಗಂಭೀರ ಆರೋಪ ಮಾಡಿದರು.

2002ರಲ್ಲಿ ಮಲ್ಲಿಕಾ ಶೆರಾವತ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್​ ಸಿಕ್ಕಿದ್ದು 2004ರ ‘ಮರ್ಡರ್​’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಮಲ್ಲಿಕಾ ಬಳಿಕ ಆಗೊಮ್ಮೆ ಈಗೊಮ್ಮೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *