ಭಾರಿ ಮಳೆ; ಮತ್ತೆ‌ ಮುಳುಗಿದ ಮಂಗಳೂರು

ಸಮಗ್ರ ನ್ಯೂಸ್: ಶುಕ್ರವಾರ ತಡರಾತ್ರಿಯಿಂದ ಕರಾವಳಿ ಭಾಗದ ಹಲವೆಡೆಗಳಲ್ಲಿ ಮತ್ತೆ ಕುಂಭದ್ರೋಣ ಮಳೆಯಾಗುತ್ತಿದೆ. ಭಾರಿ ಮಳೆಗೆ ಮಂಗಳೂರು ನಗರದ ಹಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಜನರು ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.

Ad Widget ... ..

ಗುಡುಗು ಸಹಿತ ಭಾರಿ ಮಳೆಯಿಂದ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮುಂಭಾಗ ಮಳೆ ನೀರು ನಿಂತಿದೆ. ಕದ್ರಿಕಂಬಳ, ಕೊಟ್ಟಾರ ಚೌಕಿ ಸಹಿತ ಹಲವೆಡೆ ಕೃತಕ ನೆರೆ ಸಮಸ್ಯೆ ಉಂಟುಮಾಡಿದೆ.

Ad Widget

ಪಾಂಡೇಶ್ವರ ಶಿವನಗರದಲ್ಲಿ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾಗುತ್ತಿಲ್ಲ. ನಗರದ ಬಹುತೇಕ ಕಡೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ದುಸ್ತರವಾಗಿದೆ.

Leave a Comment

Your email address will not be published. Required fields are marked *