ಕಡಬ: ಮುಸ್ಲಿಂ ಗೆಳತಿ ಮನೆಗೆ ಹೋದ ಹಿಂದೂ ಯುವತಿ| ಹಿಂದೂ ಯುವಕರ ಮೇಲೆ ದಾಂಧಲೆ ಆರೋಪಿಸಿ ದೂರು

ಸಮಗ್ರ ನ್ಯೂಸ್: ಕಡಬ ತಾಲ್ಲೂಕಿನ ಆತೂರು ಸಮೀಪದ ಕುದ್ಲೂರು ಗ್ರಾಮದ ಮುಸ್ಲಿಂ ಗೆಳತಿಯ ಮನೆಗೆ ಹಿಂದೂ ಯುವತಿ ತೆರಳಿದ್ದ ಸಂದರ್ಭ ಸಂಘ ಪರಿವಾರಕ್ಕೆ ಸೇರಿರುವ ಸಂಘಟನೆಯ ಕಾರ್ಯಕರ್ತರು ಮನೆಗೆ ನುಗ್ಗಿ ದಾಂದಲೆ ನಡೆಸಿದ ಬಗ್ಗೆ ಮುಸ್ಲಿಂ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Ad Widget ... ..

ಸ್ಥಳೀಯ ನಿವಾಸಿಗಳಾದ ಸುದರ್ಶನ್ ಗೆಲ್ಗೊಡಿ, . ಕೆ ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಕೆ ಪ್ರಸಾದ್ ಕೊಲ್ಯ ಹಾಗೂ ಇತರರ ವಿರುದ್ದ ಕಡಬ ಠಾಣೆಯಲ್ಲಿ IPC ಕಲಂ : 143,147,504,506 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿದೆ

Ad Widget

ಕಡಬ ತಾಲೂಕಿನ ಕೋಯಿಲಾ ಗ್ರಾಮದ ಮಜಲ ಮನೆಯ ನಿವಾಸಿ ಬಶೀರ್ ಎಂಬವರ ಪುತ್ರಿ ಸಂಶಿನಾ ದೂರುದಾರೆ. ಘಟನೆಯೂ ಜು 12 ರಂದು ನಡೆದಿದ್ದು ಹತ್ತು ದಿನ ತಡವಾಗಿ ದೂರು ನೀಡಲಾಗಿದೆ . ಸಂಶಿನಾರವರು ಟೈಲರ್ ಕೆಲಸ ಮಾಡಿಕೊಂಡಿಕೊಂಡಿದ್ದು ಆಕೆಯ ಸ್ನೇಹಿತೆ ಕಾವ್ಯಳ ಅಕ್ಕ ಗರ್ಭಿಣಿಯಾಗಿದ್ದು ಬಿರಿಯಾನಿ ತಿನ್ನುವ ಆಸೆ ವ್ಯಕ್ತಪಡಿಸಿದ್ದರು.

ಈ ಹಿನ್ನಲೆಯಲ್ಲಿ ಕಾವ್ಯ ಮತ್ತು ಸಂಶಿನಾ ಬಿರಿಯಾನಿ ತೆಗೆದುಕೊಂಡು ಹೋಗಲೆಂದು ಜು 12 ರಂದು ಸಂಶಿನಾಳ ಮನೆಗೆ ಆಟೋ ರಿಕ್ಷಾದಲ್ಲಿ ಬಂದಿದ್ದಾರೆ . ಈ ವೇಳೆ ಆರೋಪಿಗಳಾದ ಸುದರ್ಶನ್‌ ಗೆಲ್ಗೋಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ರವರು ಹಾಗೂ ಇತರರು ಕಾರು ಮತ್ತು ಬೈಕ್‌ನಲ್ಲಿ ಇವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ

ಕಾವ್ಯ ಮತ್ತು ಸಂಶಿನಾ ಮಜಲ ಮನೆಗೆ ತಲುಪುತ್ತಲೇ ಮನೆಯ ಬಳಿ ಬಂದು ಹಿಂದೂ ಯುವತಿಗೆ ಅವಾಚ್ಯ ಶಬ್ದಗಳಿಂದ ಬೈದು, ಗಲಾಟೆ ನಡೆಸಿ ಮುಸ್ಲಿಂ ಸ್ನೇಹಿತೆಯ ಮನೆಯವರಿಗೆ ಕೊಲೆ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

Leave a Comment

Your email address will not be published. Required fields are marked *