ಸುರತ್ಕಲ್: ಓಮ್ನಿ ಮೇಲೆ ಲಾರಿ ಪಲ್ಟಿ; ಓಮ್ನಿ ಚಾಲಕ ಮೃತ್ಯು

ಸಮಗ್ರ ನ್ಯೂಸ್: ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದ ಓಮ್ನಿ ಚಾಲಕ ಮೃತಪಟ್ಟಿರುವ ಘಟನೆ ಸುರತ್ಕಲ್ ನ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಸಂಭವಿಸಿದೆ. ಮೃತರನ್ನು ಗೋಕುಲ ನಗರ ನಿವಾಸಿ ಲೋಕೇಶ್ ಕುಲಾಲ್ (38) ಎಂದು ಗುರುತಿಸಲಾಗಿದೆ.

Ad Widget ... ..

ಅಪಘಾತದ ಪರಿಣಾಮ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಸಂಭವಿಸಿದೆ ಎನ್ನಲಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಪೊಲೀಸರು ಆಗಮಿಸಿ ಸ್ಕ್ರೈನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮಿನಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Ad Widget

ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಸ್ಕೂಟರ್ ಸವಾರರೊಬ್ಬರು ಅವಘಡದಲ್ಲಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *