ನಟಿ ಸಾಯಿಪಲ್ಲವಿ ವಿರುದ್ದ ದೂರು ನೀಡಿದ ಭಜರಂಗದಳ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ನರಮೇಧಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಇಲ್ಲಿನ ಸುಲ್ತಾನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಹೈದರಾಬಾದ್‌ನ ಭಜರಂಗ ದಳದ ಪದಾಧಿಕಾರಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Ad Widget

ಇತ್ತೀಚೆಗಿನ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು, “”ಹಿಂಸೆ ಎನ್ನುವುದು ಯಾವುದೇ ಪ್ರಕಾರದಲ್ಲಿರಲಿ ಅದು ತಪ್ಪು ಎಂಬುದು ನನ್ನ ಅಭಿಪ್ರಾಯ. ಆ ದೃಷ್ಟಿಯಲ್ಲಿ ಹೇಳುವುದಾದರೆ, ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಎಷ್ಟು ತಪ್ಪೋ, ಇತ್ತೀಚಿನ ವರ್ಷಗಳಲ್ಲಿ ಗೋ ಸಾಗಾಣಿಕೆ ಮಾಡುವವರನ್ನು ಹೊಡೆದು ಕೊಂದಿರುವ ಘಟನೆಗಳು ಅಷ್ಟೇ ತಪ್ಪಿನಿಂದ ಕೂಡಿವೆ” ಎಂದಿದ್ದರು.

Leave a Comment

Your email address will not be published. Required fields are marked *