ಮೈಸೂರು: “ಮಿಸ್ಟರ್ ಕಬಿನಿ” ಖ್ಯಾತಿಯ ಆನೆ ಇನ್ನಿಲ್ಲ

ಸಮಗ್ರ ನ್ಯೂಸ್: ಕಬಿನಿ ಹಿನ್ನೀರಿಗೆ ಆಗಮಿಸುವಂತ ಪ್ರವಾಸಿಗರಿಗೆ, ಶಕ್ತಿ ಮಾನ್ ಭೋಗೇಶ್ವರ ಎಂಬುದಾಗಿಯೇ ಕರೆಸಿಕೊಂಡಿದ್ದ, ನೀಳ ದಂತದ ಆನೆ ನಿಧನವಾಗಿದೆ. ಈ ಮೂಲಕ ಕಬಿನಿಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಭೋಗೇಶ್ವರ ಆನೆ ಇನ್ನಿಲ್ಲವಾಗಿದೆ.

Ad Widget ... ..

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಕಬಿನಿ ಹಿನ್ನೀರಿನ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಮಿಸ್ಟರ್ ಕಬಿನಿ ಎಂದೇ ಖ್ಯಾತಿ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಆನೆಯ ಕಳಬರಹ ಪತ್ತೆಯಾಗಿದೆ.

Ad Widget

ಸುಮಾರು 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದಂತ ಭೋಗೇಶ್ವರ, ತನ್ನ 7-8 ಅಗೂ ಉದ್ದದ ನೀಳ ದಂತದ ಮೂಲಕ, ಸುಂದರ ನಡಿಗೆಯಿಂದ ಪ್ರವಾಸಿಗರನ್ನು, ಪ್ರಾಣಿ ಪ್ರಿಯರನ್ನು ಹೆಚ್ಚು ಆಕರ್ಷಿಸಿತ್ತು. ಆದ್ರೇ ಇಂತಹ ಆನೆ ಇಂದು ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದೆ.

Leave a Comment

Your email address will not be published. Required fields are marked *