ಮಂಗಳೂರು: ಪಣಂಬೂರು ಬೀಚ್ ನಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು

ಸಮಗ್ರ ನ್ಯೂಸ್: ಪಣಂಬೂರು ಬೀಚ್ ನಲ್ಲಿ ಈಜಲು ತೆರಳಿದ್ದ ಮೈಸೂರು ಮೂಲದ ಇಬ್ಬರು ನೀರುಪಾಲಾದ ಘಟನೆ ಇಂದು ನಡೆದಿದೆ. ಮೃತರನ್ನು ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ (45) ಮತ್ತು ನಿಂಗಪ್ಪ (60) ಎಂದು ಗುರುತಿಸಲಾಗಿದೆ.

Ad Widget ... ..

ಇವರು ಮಂಗಳೂರಿನಲ್ಲಿ ನಡೆಯುತ್ತಿದ್ದ ಹಲಸಿನ ಮೇಳದಲ್ಲಿ ಭಾಗವಹಿಸಲು ಆಗಮಿಸಿದ್ದರು.ಇಂದು ಬೆಳಿಗ್ಗೆ ಪಣಂಬೂರು ಕಡಲ ಕಿನಾರೆಗೆ ತೆರಳಿದ್ದು, ನೀರಿನಲ್ಲಿ ಈಜಾಡಿದ್ದಾರೆ. ಆದರೆ ಈ ವೇಳೆ ದಿವಾಕರ ಆರಾಧ್ಯ ಮತ್ತು ನಿಂಗಪ್ಪ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿ ನೀರು ಪಾಲಾಗಿದ್ದಾರೆ. ಇವರ ಜೊತೆ ಬಂದಿದ್ದ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Leave a Comment

Your email address will not be published. Required fields are marked *