ವಾಲ್ಮೀಕಿ ಆಶ್ರಮ‌ ಶಾಲೆ ಬಾಳಿಲದಲ್ಲಿ ಪ್ರವೇಶಾತಿ ಆರಂಭ

ಸಮಗ್ರ ನ್ಯೂಸ್: 2022-23ನೇ ಸಾಲಿಗೆ 1ನೇ ತರಗತಿಯಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಆಶ್ರಮ ಶಾಲೆ, ಬಾಳಿಲ ಇಲ್ಲಿ ಪ್ರವೇಶಾವಕಾಶ ಆರಂಭಗೊಂಡಿದೆ.

Ad Widget ... ..

ಪರಿಶಿಷ್ಟ ಪಂಗಡದವರಿಗೆ (ST) ಮೊದಲ ಆದ್ಯತೆಯಿದ್ದು, ಪರಿಶಿಷ್ಟ ಜಾತಿ ಮತ್ತು ಇತರ ವರ್ಗದವರಿಗೆ ಅವಕಾಶವಿರುತ್ತದೆ.

Ad Widget

ಆಯ್ಕೆ ಮತ್ತು ದಾಖಲಾತಿ ಪ್ರಕ್ರಿಯೆ ಹೀಗಿದೆ:

  • 1, 2, 3, 4 ಮತ್ತು 5ನೇ ತರಗತಿಯವರೆಗೆ ದಾಖಲಾತಿಗೆ ಅವಕಾಶ.
  • ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡಿನ ಪ್ರತಿ ಮತ್ತು 6 ಫೋಟೋ ಲಗತ್ತಿಸುವುದು.
  • ಕುಟುಂಬ ವಾಸ್ತವ್ಯದ ಬಗ್ಗೆ ವಾಸ್ತವ್ಯ ಪ್ರಮಾಣ ಪತ್ರ
  • ಇಲಾಖಾ ಮೀಸಲಾತಿ ನಿಯಮಾವಳಿಯಂತೆಯೇ ಆಯ್ಕೆ ಮಾಡಲಾಗುವುದು.
  • ದಾಖಲಾತಿ ಅರ್ಜಿ ಆಶ್ರಮ ಶಾಲೆಯಲ್ಲಿ ಲಭ್ಯವಾಗಿರುತ್ತದೆ.

ವಿಶೇಷತೆಗಳು:

*ನಿಲಯಾರ್ಥಿಗಳಿಗೆ ವಸತಿಯೊಂದಿಗೆ ಉಚಿತ ಊಟೋಪಚಾರ

  • ಪ್ರತಿ ವರ್ಷ 2 ಜೊತೆ ಸಮವಸ್ತ್ರ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕ ನೀಡಲಾಗುವುದು.
  • ವಿದ್ಯಾರ್ಥಿಗಳಿಗೆ ಆಕರ್ಷಕ ಗ್ರಂಥಾಲಯ ಹಾಗೂ ಆಟದ ಸಾಮಾಗ್ರಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಕರೆ ಮಾಡಬಹುದು
9008384924

Leave a Comment

Your email address will not be published. Required fields are marked *