ಧರ್ಮ ಸಂಘರ್ಷಕ್ಕೆ ಕಾರಣವಾಗಿರುವ ಗೃಹಸಚಿವರನ್ನು ಬಂಧಿಸಿ – ಡಿಕೆಶಿ

ಸಮಗ್ರ ನ್ಯೂಸ್: ‘ಧರ್ಮಗಳ ನಡುವೆ ಸಂಘರ್ಷ ಭಾವನೆ ಮೂಡಿಸಿ, ಅಶಾಂತಿ ಸೃಷ್ಟಿಗೆ ಕಾರಣವಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

Ad Widget ... ..

ಮಂಡ್ಯದ ಕೆ.ಆರ್ ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಘಾತದ ನಂತರದ ಜಗಳದ ವೇಳೆ ಚಂದ್ರು ಕೊಲೆಯಾಗಿದ್ದರೂ, ಉರ್ದು ಭಾಷೆ ಬರುವುದಿಲ್ಲವೆಂಬ ಕಾರಣಕ್ಕೆ ದಲಿತ ಯುವಕನ ಕೊಲೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಸಮಾಜಕ್ಕೆ ಸತ್ಯ ತಿಳಿಸಿರುವ ಪೊಲೀಸರು ಅಭಿನಂದನೆಗೆ ಅರ್ಹರು’ ಎಂದರು.

Ad Widget

Leave a Comment

Your email address will not be published. Required fields are marked *